ಬಳ್ಳಾರಿ :
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಸಕ ಶ್ರೀರಾಮುಲು ಮುಖ್ಯಮಂತ್ರಿ ಆಗುತ್ತಾರೆ ಎಂದು ವಿ.ಸೋಮಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಬಳ್ಳಾರಿ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷಣಗಳನ್ನು ರಾಜ್ಯದಲ್ಲಿ ಶ್ರೀರಾಮುಲು ಹೊಂದಿದ್ದಾರೆ. ಇತ್ತ ಕೇದಾರನಾಥ ಸ್ವಾಮೀಜಿ ಕೂಡ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಆಗುವ ಲಕ್ಷಣಗಳಿವೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ನಂತರ ಶ್ರೀರಾಮುಲು ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಹೇಗೋ ಹಾಗೇ ಬಳ್ಳಾರಿಗೆ ಶಾಸಕ ಶ್ರೀರಾಮುಲು ಎಂದು ಸೋಮಣ್ಣ ಶ್ಲಾಘಿಸಿದರು.
ವಿ. ಸೋಮಣ್ಣ ಅವರ ಹೇಳಿಕೆ ಪಕ್ಷದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಶ್ರೀರಾಮುಲು ಅವರನ್ನು ಮುಖ್ಯಂತ್ರಿ ಅಭ್ಯರ್ಥಿ ಎಂದು ಬಿಜೆಪಿ ನಾಯಕರು ಎಂದಿಗೂ ಹೇಳಿಲ್ಲ. ಆದರೆ ವಿ. ಸೋಮಣ್ಣ ಅವರ ದಿಢೀರ್ ಹೇಳಿಕೆಯಿಂದಾಗಿ ನಾಯಕರನ್ನು ಮುಜುಗರಕ್ಕೀಡಾಗಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ