ಕುಣಿಗಲ್ :
ತಾಲ್ಲೂಕಿನ ಸಂತೇಮಾವತ್ತೂರಿನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಬೀಗ ಮುರಿದು ಸುಮಾರು 1 ಲಕ್ಷ ರೂ ಮೌಲ್ಯದ ಬ್ರಾಂದಿ, ವಿಸ್ಕಿ, ಬಿಯರ್ ಬಾಟಲ್ ಹಾಗೂ ಸಿಸಿ ಕ್ಯಾಮೆರಾದ ಡಿವಿಆರ್ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಭವ್ಯ ಬಾರ್ ಅಂಡ್ ರೆಸ್ಟೋರೆಂಟ್ನ್ನು ಇತ್ತೀಚೆಗೆ ಹೆಗ್ಗಡತಿಹಳ್ಳಿ ರಸ್ತೆಗೆ ಸ್ಥಳಾಂತರಿಸಲಾಗಿತ್ತು. ಬಾರ್ನ ಕಿಟಕಿ ಮತ್ತು ಶೆಟರ್ ಹೊಡೆದು ಕಳ್ಳರು ಬಿಯರ್, ಬ್ರಾಂದಿ , ವಿಸ್ಕಿ ಸೇರಿದಂತೆ 12 ಬಾಕ್ಸ್ಗಳನ್ನು ದೋಚಿದ್ದಾರೆ, ಕಳ್ಳತನದ ಕುರುಹು ಸಿಗಬಾರದೆಂದು ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾಗಳ ಡಿವಿಆರ್ನ್ನು ಕದ್ದು ಪರಾರಿಯಾಗಿದ್ದಾರೆ.
ಬಾರ್ ಅಂಗಡಿಗೆ ಹಿಂಬದಿಯ ಕಿಟಕಿಯಿಂದ ಕನ್ನ ಹಾಕಿರುವ ಕಳ್ಳರು ಅದರಲ್ಲಿದ್ದ ಮದ್ಯದ ಬಾಟಲ್ಗಳನ್ನು ವಾಹನದ ಮುಖಾಂತರ ದೋಚುವ ಮೂಲಕ ಸಿನಿಮೀಯ ಮಾದರಿಯಲ್ಲಿ ಕೈಚಳಕ ತೋರಿಸಿದ್ದಾರೆಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ