ಮೈಸೂರು:

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅರ್ಪಿಸುವ ಹರಕೆ ಸೀರೆಗಳ ಮಾರಾಟದಿಂದಲೇ ದೇವಾಲಯಕ್ಕೆ ವರ್ಷಕ್ಕೆ ಕೋಟಿ ಕೋಟಿ ರೂ.ಗಳ ಆದಾಯ ಬರುತ್ತಿದೆ.
ನವರಾತ್ರಿ ಉತ್ಸವ ಸೇರಿದಂತೆ ಇತರೆ ದಿನಗಳಲ್ಲಿ ಭಕ್ತಾಧಿಗಳು ಚಾಮುಂಡೇಶ್ವರಿಗೆ ಹರಕೆಯ ರೂಪದಲ್ಲಿ ಸೀರೆಗಳನ್ನು ನೀಡುತ್ತಾರೆ. ಇಲ್ಲಿ 300ರೂ. ನಿಂದ 10 ಸಾವಿರ ರೂ.ದವರೆಗಿನ ಸೀರೆಗಳನ್ನು ಹರಕೆಯಾಗಿ ನೀಡುತ್ತಾರೆ.
ಎರಡು- ಮೂರು ವರ್ಷದಿಂದ ಪ್ರತಿದಿನ ಅಥವಾ ಎರಡು ದಿನಕ್ಕೆ ಒಮ್ಮೆ ಸೀರೆ ಮಾರಾಟ ಮಾಡಲಾಗುತ್ತಿದ್ದು, ಸಂಗ್ರಹವಾದ ಸೀರೆಗಳನ್ನು ಭಕ್ತಾದಿಗಳಿಗೆ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ದೇವಸ್ಥಾನಕ್ಕೆ ಆದಾಯ ಹೆಚ್ಚಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








