ಹರಪನಹಳ್ಳಿ
ವಾಲ್ಮೀಕಿ ಜನಾಂಗದ ಜಾತಿ ಪ್ರಮಾಣಪತ್ರದ ದುರ್ಬಳಕೆ ಹೆಚ್ಚಾಗಿದ್ದು, ನಿಜವಾದ ವಾಲ್ಮೀಕಿ ನಾಯಕರಿಗೆ ಅನ್ಯಾಯವಾಗುವುದನ್ನು ನಾವು ತಡೆದು ಅಂತವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಬೇಕು. ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರದಿಂದ ಸಮಾಜದ ಸಂಘಟನಾ ಶಕ್ತಿಯನ್ನು ಮುರಿಯಲು ಪ್ರಯತ್ನಿಸುತ್ತಿರುವವರ ಬಗ್ಗೆ ನಾವುಗಳು ಎಚ್ಚರದಿಂದಿರಬೇಕು ಎಂದು ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಕರೆ ನೀಡಿದ್ದಾರೆ.
ತಾಲೂಕಿನ ಗುಂಡಗತ್ತಿ ಗ್ರಾಮದಲ್ಲಿ ಅಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಗುಂಡಗತ್ತಿ ತಾಲೂಕು ಪಂಚಾಯಿತಿ ಸದಸ್ಯರಾದ ವೈ.ಬಸಪ್ಪ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ ಜಯಂತ್ಯೋತ್ಸವಗಳು ಕೇವಲ ಪ್ಲೆಕ್ಸ್ಗಳನ್ನು ಹಾಕುವುದು, ಸಮಾಜದ ಮುಖಂಡರಿಂದ ಭಾಷಣ, ಸಮಾಜದ ಇತಿಹಾಸವನ್ನು ಉಪನ್ಯಾಸ ನೀಡುವುದಕ್ಕೆ ಸೀಮಿತವಾಗದೆ ಇತಿಹಾಸ ನೆನಪಿಸಿಕೊಂಡು ನಮ್ಮಲ್ಲಿ ಅಕ್ಷರ ವಂಚಿತರಾದವರಿಗೆ ಅಕ್ಷರವನ್ನು ನೀಡಿ ಅವರನ್ನು ಆರ್ಥಿಕವಾಗಿ ಮೇಲಕ್ಕೆ ತರುವಂತಹ ಚಿಂತನೆಗಳು ಆಗಬೇಕು. ಅಗ ಮಾತ್ರ ಸಮಾಜ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎ, ಬಸವರಾಜ ಮಾತನಾಡಿ ರಾಮಾಯಣ ಮಹಾಗ್ರಂಥ ಜಗತ್ತಿಗೆ ಸಂದೇಶ ನೀಡಿ ದೇಶದ ಮೌಲ್ಯ ಹೆಚ್ಚಿಸಿದೆ. ದುರಂತವೆಂದರೆ ವಾಲ್ಮೀಕಿ ರಚಿಸಿದ ರಾಮಾಯಣದಿಂದ ರಾಮನನ್ನು ಪ್ರತಿನಿಧಿಸಿ ವಾಲ್ಮೀಕಿಯನ್ನು ಮೆರೆತಿದ್ದಾರೆ. ಜಯಂತಿಯ ಮಹತ್ವವನ್ನು ಅರಿತು ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಂಡಾಗ ಜಯಂತಿಗೆ ಅರ್ಥ ಬರುತ್ತದೆ ಎಂದರು.
ನ್ಯಾಯವಾದಿ ಕೆ.ಉಚ್ಚೆಂಗೆಪ್ಪ ಮುಖಂಡರಾದ ಮಂಡಕ್ಕಿ ಸುರೇಶ, ವೈ.ರಾಜೇಶ, ಭೀಮಪ್ಪ, ಕೋಟ್ರಪ್ಪ ಎಚ್, ಎಚ್.ಹನುಮಂತಪ್ಪ, ಎಚ್.ಶಿವರಾಜ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/26-HRP-2.gif)