ಬರಿ ಬಿಲ್ ಕೇಳಿದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ

ಬೆಂಗಳೂರು

        ಬರಿ ಬಿಲ್ ಕೇಳಿದಕ್ಕೆ ಎಂಪೈರ್ ಹೊಟೇಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿ ಆಪ್ರಾಪ್ತನೊಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

       ಹಲ್ಲೆಗೊಳಗಾದ ಎಂಪೈರ್ ಹೊಟೇಲ್ ಸಿಬ್ಬಂದಿಗಳಾದ ಅಜಿತ್ ಹಾಗೂ ಆಂಥೋನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶಸ್ತ್ರ ಚಿಕಿತ್ಸೆಕ್ಕೊಳಗಾಗಿರುವ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

      ಕೋರಮಂಗಲದ ಶಂಕರಗೌಡ ಎನ್ನುವರು ಆನ್ ಲೈನ್‍ನಲ್ಲಿ ಎಂಪೈರ್ ಹೋಟೆಲ್‍ನಲ್ಲಿ ಊಟ ಆರ್ಡರ್ ಮಾಡಿದ್ದಾರೆ.ಅದನ್ನು ಕೊಡಲು ಡೆಲಿವರಿ ಬಾಯ್ ಅಜಿತ್ ಶಂಕರೇಗೌಡರ ಮನೆಗೆ ಬಂದಿದ್ದಾನೆ. ಈ ವೇಳೆ ಪಾರ್ಟಿ ಮಾಡುತ್ತಿದ್ದ ಶಂಕರೇಗೌಡ ಹಾಗೂ ಸಹಚರರು ದಾಲ್ ರುಚಿ ನೋಡಿ ಚೆನ್ನಾಗಿಲ್ಲ ಅಂತಾ ಹೇಳಿ ಅಜಿತ್‍ಗೆ ಬೇರೆ ದಾಲ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಚಾಕುವಿನಿಂದ ಚುಚ್ಚಿದರು

       ಅಜಿತ್ ವಾಪಸ್ ಹೋಗಿ ಬೇರೆ ದಾಲ್ ತಂದು 1050 ರೂಪಾಯಿ ಹಣ ಆಗಿದೆ ಎಂದು ಬಿಲ್ ಕೇಳಿದ್ದಾನೆ. ಇದರಿಂದ ಕೆರಳಿದ ಶಂಕರೇಗೌಡ ಹಾಗೂ ಸಹಚರರು ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅಜಿತ್ ಜೊತೆಗೆ ಬಂದಿದ್ದ ಮತ್ತೊಬ್ಬ ಸಿಬ್ಬಂದಿ ಅಂಥೋನಿಗೂ ಅವರು ಚಾಕುವಿನಿಂದ ಇರಿದಿದ್ದಾರೆ.

      ಘಟನೆ ನಡೆದ ತಕ್ಷಣ ಅಂಥೋನಿ ಎಂಪೈರ್ ಹೊಟೇಲ್‍ಗೆ ಮಾಹಿತಿ ನೀಡಿದ್ದಾನೆ.ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪೆÇಲೀಸರಿಗೆ ಮಾಹಿತಿ ನೀಡಿ ಖಾಸಗಿ ಆಸ್ಪತ್ರೆಗೆ ಇಬ್ಬರನ್ನ ದಾಖಲಿಸಿದ್ದಾರೆ. ಇಬ್ಬರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ.

         ಈ ಸಂಬಂಧ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಹಲ್ಲೆ ನಡೆಸಿದ್ದ ಶಂಕರೇಗೌಡ ,ಅರುಣ್ ಕುಮಾರ್, ವಿಶಾಲ್, ಮುತ್ತುರಾಜ್ ಸೇರಿ ನಾಲ್ವರನ್ನು ಬಂಧಿಸಿ 17 ವರ್ಷದ ಅಪ್ರಾಪ್ತನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link