ಪರಶುರಾಮಪುರ
ವಾಲ್ಮೀಕಿ ಮಹರ್ಷಿ ಆಧ್ಯಾತ್ಮಿಕ ಲೋಕದ ಮಹಾ ಸಾಧಕರು, ಅವರು ರಚಿಸಿದ ರಾಮಾಯಣಗ್ರಂಥವು ಮನುಕುಲದ ಶ್ರೇಷ್ಟ ಧಾರ್ಮಿಕ ಗ್ರಂಥವಾಗಿದೆ ಎಂದು ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದ ಶ್ರೀ ಬಸವಕಿರಣಸ್ವಾಮೀಜಿ ತಿಳಿಸಿದರು.
ಸಮೀಪದ ನಾಗಗೊಂಡನಹಳ್ಳಿ ಹೊರವಲಯದ ವೇದಾವತಿ ನದಿ ದಡದಲ್ಲಿನ ಚಿಲುಮೇರುದ್ರಸ್ವಾಮಿ ಮಠದ ಎಸ್‍ಜೆಎಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಳ್ಮೀಕಿ ಜಯಂತ್ಯುತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಹಾತ್ಮರ ಜೀವನ ನಮಗೆ ಆದರ್ಶವಾಗಿದೆ. ಸಮಾಜಕ್ಕಾಗಿ ಬದುಕಿದವರು ಧಾರ್ಮಿಕ ರಂಗದ ಮಹಾಪರ್ವ ಆಗಿದ್ದರು.
12 ನೇ ಶತಮಾನದಲ್ಲಿ ಬಸವಾದಿಶರಣರು ಅನುಭವ ಮಂಟ ಪದ ಮೂಲಕ ಸಮಾಜದಲ್ಲಿ ಕೆಳವರ್ಗದ ಜನರನ್ನು ಒಂದುಗೂಡಿಸಿ ಕಲ್ಯಾಣರಾಜ್ಯ ಕಟ್ಟಿದರು.
21 ನೇ ಶತಮಾನದಲ್ಲಿ ಚಿತ್ರದುರ್ಗದ ಶಿವಮೂರ್ತಿ ಮುರುಘಾಶರಣರು ವಿವಿಧ ಸಮುದಾಯದವರಿಗೆ ಮಠಗಳನ್ನು ಮಾಡಿಕೊಟ್ಟು ಅದಕ್ಕೆ ಧರ್ಮಗುರುಗಳನ್ನು ಆಯ್ಕೆ ಮಾಡಿ ವಾಲ್ಮೀಕಿ ಸಮಾಜಕ್ಕೆ ಇಬ್ಬರು ಶ್ರೇಷ್ಟ ಗುರುಗಳನ್ನು ನೀಡಿದ್ದಾರೆ ಎಂದರು. ಸಮಾಜದ ಎಲ್ಲಾ ಜನಾಂಗದ ಶ್ರೇಯೋಭಿವೃಧ್ದಿಗೆ ಶ್ರಮಿಸಿದ ಕೀರ್ತಿ ಚಿತ್ರದುರ್ಗದ ಮುರುಘಾಶರಣರದು ಎಂದು ಸ್ಮರಿಸಿದರು.
ಮುಖ್ಯಶಿಕ್ಷಕಿ ಇಂದುಮತಿ ಮಾತನಾಡಿ ದಾರ್ಶನಿಕರು ಹಾಕಿಕೊಟ್ಟ ಮಾರ್ಗಧಲ್ಲಿ ನಡೆದರೆ ನಮ್ಮ ಜೀವಿತ ಪಾವನವಾಗುತ್ತದೆ ಎಂದರು.ಇದೇ ವೇಳೆ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನೆರೆದಿದ್ದ ಮಕ್ಕಳು, ಗ್ರಾಮಸ್ಥರಿಗೆ ಸಿಹಿಯೂಟ ನೀಡಿದರು.
ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಇಂದುಮತಿ, ಶಿಕ್ಷಕಿ ಭವ್ಯ, ಶಾಲಾ ಮಕ್ಕಳು, ಪೋಷಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
