ಟಿ.ಎನ್.ಕೋಟೆ;ನೂತನ ದೇವಸ್ಥಾನ ಲೋಕಾರ್ಪಣೆ

ಪರಶುರಾಮಪುರ

      ಟಿಎನ್ ಕೋಟೆಯಲ್ಲಿ ಅ 28 ಕ್ಕೆ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ನೂತನ ದೇವಸ್ಥಾನ, ಧ್ಯಾನ, ಯೋಗ, ಪ್ರಾರ್ಥನಾ ಮಂದಿರ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ

      ಟಿಎನ್‍ಕೋಟೆ ಗ್ರಾಮದಲ್ಲಿ ಅ 28 ಕ್ಕೆ ಸೂರ್ಯೋದಯದ ವೇಳೆಗೆ ಮೈಲಾರಲಿಂಗೇಶ್ವರಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ, ಸನಿಹದ ವೇದಾವತಿ ನದಿಗೆ ಭಕ್ತರು ಕೊಂಡೊಯ್ದು ಗಂಗಾಪೂಜೆ, ನೈವೇದ್ಯ, ಪ್ರಾಣ ಪ್ರತಿಷ್ಟಾಪನೆ, ಕುಂಭಾಕಳಶ, ನಂದೀಧ್ವಜ, ಗೊರವಯ್ಯನ ಕುಣಿತದ ಮೂಲಕ ಹೂವಿನ ಅಲಂಕೃತ ಬೆಳ್ಳಿ ಸಾರೋಟಿನಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುವುದು.
ಈ ವೇಳೆ ಗ್ರಾಮ ಪರ್ಯಟನೆ, ಕೋರಣ್ಯ ಭಿಕ್ಷೆ ಮಾಡಲಾಗುವುದು. ನಂತರ ವೇದ ಬ್ರಹ್ಮ ಅನಂತರಾಮ ಗೌತಮ್, ನಾಗಶಯನ ಗೌತಮ್ ಇವರ ನೇತೃತ್ವದಲ್ಲಿ ನೂತನ ದೇವಾಲಯದ ಪ್ರವೇಶೋತ್ಸವ ಜರುಗುವುದು.

     ಅ 28 ರ ಸಂಜೆ ಮೈಲಾರಲಿಂಗನ ದೇವಸ್ಥಾನದಲ್ಲಿ ಗಣಪತಿ ಪೂಜೆ, ಶುಧ್ದಪುಣ್ಯಾಹ, ಋತಿಗ್ರಹಣ, ದೇವನಾಂದಿ, ಕಳಶಸ್ಥಾಪನೆ, ನವಗ್ರಹಾರಾಧನೆ, ವಾಸ್ತುಶಾಂತಿ, ಮೃತ್ಯುಂಜಯ ಹೋಮ, ಅಷ್ಟದಿಕ್ಪಾಲಕರ ಆವಾಹನೆ, ಅಗ್ನಿಪ್ರತಿಷ್ಟಾಪನೆ, ನವಗ್ರಹ ಶಾಂತಿ, ವಾಸ್ತು ರುದ್ರಹೋಮ, ಪರಿವಾರ ದೇವತಾ ಹೋಮಗಳು, ಜಪಗಳು, ನಂತರ ಮಹಾಮಂಗಳಾರತಿ ಸೇವೆ ಭಕ್ತರಿಗೆ ಪ್ರಸಾದ ವಿನಿಯೋಗವಿದೆ.

      ಅ29 ರ ಸೋಮವಾರ ಮುಂಜಾನೆ ಮೈಲಾರಲಿಂಗೇಶ್ವರಸ್ವಾಮಿಯ ದೇವಸ್ಥಾನದಲ್ಲಿ ಗಣಪತಿ, ಗಂಗಿಮಾಳಮ್ಮ, ಶಿಲಾ ವಿಗ್ರಹ ಪ್ರತಿಷ್ಟಾಪನೆ, ಮೈಲಾರಲಿಂಗ ದೇವರು ಪಲ್ಲಕ್ಕಿಯೊಡನೆ ಗರ್ಭಗುಡಿ ಪ್ರವೇಶ, ನೇತ್ರೋನ್ಮಿಲನ, ದೃಷ್ಟಿಬಿಂಬ ದರ್ಶನ, ಬಲಿಹರಣ, ಪ್ರತಿಷ್ಟಾಹೋಮ, ಕಳಾಹೋಮ, ಜಯಾದಿ ಹೋಮ, ಪ್ರಾಯಶ್ಚಿತ್ರ ಹೋಮ, ಕಳಶ ಪ್ರತಿಷ್ಟಾಪನೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗವಿದೆ.

      ಈಶ್ವರಾನಂದಪುರಿ ಮಹಾಸ್ವಾಮಿಗಳು ದೇವರಿಗೆ ಪಂಚಾಮೃತಾಭಿಷೇಕ, ರುದ್ರಾಭೀಷೇಕ, ಮಹಾಪೂಜೆ, ಶಿವಸಹಸ್ರನಾಮ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮೈಲಾರಲಿಂಗನ ಅಷ್ಟೋತ್ತರ ನಾಮಗಳು, ಮಹಾನೈವೇದ್ಯ, ನಂತರ 25 ಗೊರವಯ್ಯಗಳ ಮೈಲಾರಲಿಂಗನ ಬೃಹತ್ ದೋಣಿ ಸೇವೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿದೆ.

       ಅ.29 ರ ಸೋಮವಾರ ಸಂಜೆ ಶ್ರೀ ಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿಂಹಾಸನಾರೂಡ ಕಾಗಿನೆಲೆ ಸಂಸ್ಥಾನದ ಕನಕಗುರು ಪೀಠದ ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು, ಮೈಲಾರ ಕ್ಷೇತ್ರದ ಧರ್ಮಕರ್ತರಾದ ಶ್ರೀ ಗುರುವೆಂಕಪ್ಪಯ್ಯ ಒಡೆಯರ್ ಇವರ ನೇತೃತ್ವದಲ್ಲಿ

      ಹೊಸದುರ್ಗದ ಕನಕ ಗುರುಪೀಠದ ಶ್ರೀ ಈಶ್ವರಾನಂದ ಪುರಿಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ಸಮಕ್ಷಮದಲ್ಲಿ ಪ್ರಾರ್ಥನಾ ಮಂದಿರವನ್ನು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಲೋಕಾರ್ಪಣೆಗೊಳಿಸುವರು. ದೇವಾಲಯದ ಅನಾವರಣವನ್ನು ಚಿತ್ರದುರ್ಗದ ಉಸ್ತುವಾರಿ ಸಚಿವ, ಕಾರ್ಮಿಕ ಸಚಿವ ಪಾವಗಡ ವೆಂಕಟರಮಣಪ್ಪ ಉಧ್ಘಾಟಿಸುವರು.ದೇವಸ್ಥಾನದ ನಿರ್ಮಾಣದ ದಾನಿಗಳ ನಾಮಫಲಕ ಅನಾವರಣವನ್ನು ಚಿತ್ರದುರ್ಗದ ಸಂಸದ ಬಿ ಎನ್ ಚಂದ್ರಪ್ಪ ಲೋಕಾರ್ಪಣೆಗೊಳಿಸುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಓ ಬೈಲಪ್ಪ ವಹಿಸುವರು.

        ಗ್ರಾಮದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯ ಕಲಾತಂಡಗಳು, ಜನಪದ ಹಾಡುಗಾರರು, ಕೋಲಾಟ, ಭಜನೆ, ಗೊರವಯ್ಯಗಳ ಕುಣಿತ ಸಾಹಿತ್ಯ-ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸೇವಾ ಟ್ರಸ್ಟ್ ಸೇವಾಸಮಿತಿಯ ಕಾರ್ಯಾಧ್ಯಾಕ್ಷ ಪ್ರಾಧ್ಯಾಪಕ ಎಂ ಶಿವಲಿಂಗಪ್ಪ ಪತ್ರಿಕೆಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap