ತಿಪಟೂರು :
ನಗರದ ಪಶ್ಚಿಮದ ಹೆಬ್ಬಾಗಿನಂತಿರುವ ಹಾಸನವೃತ್ತದ ಒಂದು ಭಾಗದಲ್ಲಿ ಪ್ರತಿಷ್ಠಿತ ಕಲ್ಪತರು ತಾಂತ್ರಿಕ ವಿದ್ಯಾಲಯ, ಸ್ಟೆಲ್ಲಾ ಮೇರಿಸ್ ಶಾಲೆ, ಕಲ್ಪತರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳು, ಇನ್ನಿತರೆ ಶಾಲಾ ಕಾಲೇಜುಗಳಿದ್ದು, ಅನೇಕ ಆಸ್ಪತ್ರೆಗಳು ಮತ್ತು ಸರ್ಕಾರಿ ಕಛೇರಿಗಳಿಗಾಗಿ ದಿನನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ರೈತರು, ನೌಕರರು, ವೃದ್ಧರು ಬರುತ್ತಾರೆ.
ಅದಲ್ಲದೇ ಇದು ಮುಖ್ಯ ರಸ್ತೆಯಾಗಿರುವುದರಿಮದ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಇಲ್ಲಿನ ಅರಸೀಕೆರೆಯ ರಸ್ತೆಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ನಗರಸಭೆಯಿಂದ ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಸಿದ್ದ ತಂಗುದಾಣವನ್ನು ಚರಂಡಿಯನ್ನು ನಿರ್ಮಿಸುವ ಉದ್ದೇಶದಿಂದ ತೆರವುಗೊಳಿಸಿದ್ದು ಸರಿಯಷ್ಟೆ. ಆದರೆ ಅದನ್ನು ವ್ಯವಸ್ಥಿತ ರೀತಿಯಲ್ಲಿ ತೆರವುಗೊಳಿಸಿದೆ ಬೇಕಾಬಿಟ್ಟು ಕಿತ್ತು ಯಂತ್ರದ ಸಹಾಯದಿಂದ ಉಪಯೋಗಕ್ಕೆ ಬಾರದಂತೆ ರಸ್ತೆಯ ಪಕ್ಕಕ್ಕೆ ದೂಕಿರುತ್ತಾರೆ.
ನಂತರ ಚರಂಡಿಯನ್ನು ನಿರ್ಮಿಸಿ ಪ್ರಯಾಣಿಕರಿಗೆ ತಂದುದಾಣವನ್ನು ನಿರ್ಮಿಸುವ ಗೋಜಿಗೆ ಯಾವುದೇ ಅಧಿಕಾರಿಗಳು ಮುತುವರ್ಜಿವಹಿಸಿದ ಕಾರಣ ಪ್ರಯಾಣಿಕರು, ವಿದ್ಯಾರ್ಥಿಗಳು, ವೃದ್ಧರು ಮಳೆ ಬಿಸಿಲೆನ್ನದೇ ರಸ್ತೆಯಲ್ಲೇ ನಿಲ್ಲುವಂತಾಗಿದ್ದು ಒಂದು ವಾಹನ ಬಂದರೆ ರಸ್ತೆಯು ಸಂಪೂರ್ಣವಾಗಿ ಬಂದಾಗುತ್ತಿದ್ದು ಪ್ರಯಾಣಿಕರು ತಾಮುಂದು, ತಾಮುಂದು ಎಂದು ಬಸ್ಹತ್ತಲು ಪರದಾಡುವಂತಾಗಿದೆ. ಆದ್ದರಿಂದ ಹಾಸನ ವೃತ್ತದಲ್ಲಿ ಶೀಘ್ರವಾಗಿ ತಂಗುದಾಣವನ್ನು ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದು ಜೊತೆಗೆ ಇಲ್ಲಿ ನಗರಸಭೆಯ ವತಿಯಿಂದ ಶೌಚಾಲಯವನ್ನು ನಿರ್ಮಿಸಬೇಕೆಂದು ಪ್ರಾಯಾಣಿಕರ ಬೇಡಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ