ಪೊಲೀಯೋ ನಿರ್ಮೂಲನೆಗೆ ಜಾಗೃತಿ ಜಾಥ

ಚಿತ್ರದುರ್ಗ:

        24 ನೇ ವಿಶ್ವ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ ಚಿತ್ರದುರ್ಗದ ಎಲ್ಲಾ ರೋಟರಿ ಮತ್ತು ಇನ್ನರ್‍ವೀಲ್ ಕ್ಲಬ್‍ಗಳ ಸಹಯೋಗದೊಂದಿಗೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೋಮವಾರ ಚಿತ್ರದುರ್ಗದಲ್ಲಿ ಜಾಥ ನಡೆಸಿ ಗಾಂಧಿವೃತ್ತ ಹಾಗೂ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಪೋಲಿಯೋ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಿದರು.

      ರೋಟರಿ ಬಾಲಭವನದ ಮುಂಭಾಗದಿಂದ ಹೊರಟ ಜಾಥ ಗಾಂಧಿವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಶ್ವ ಪಲ್ಸ್ ಪೋಲಿಯೋ ದಿನಾಚರಣೆಯ ಮಹತ್ವ ಕುರಿತು ಜನತೆಯಲ್ಲಿ ಅರಿವು ಮೂಡಿಸಿತು.

       ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಬೇಕಾಗಿರುವುದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿ ಹಾಕಿಸಿ ಪೋಲಿಯೋ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕೆಂದು ಜಾಥದಲ್ಲಿ ಪಾಲ್ಗೊಂಡಿದ್ದವರು ಮನವಿ ಮಾಡಿದರು.

        ಡಿಸ್ಟ್ರಿಕ್ಟ್ ಪಲ್ಸ್ ಪೋಲಿಯೋ ಚೇರ್ಮನ್ ಎಂ.ಕೆ.ರವೀಂದ್ರ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರೇವಣಸಿದ್ದಪ್ಪ, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರೇಖಾ ಸಂತೋಷ್, ಕಾರ್ಯದರ್ಶಿ ಶೈಲಜ, ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ ಅಧ್ಯಕ್ಷೆ ಜಯಶ್ರಿಷಾ, ಕಾರ್ಯದರ್ಶಿ ಪಿ.ಬಿ.ಶಿವರಾಂ, ವೈ.ಚಂದ್ರಶೇಖರಯ್ಯ, ರೊ.ಎಸ್.ವೀರೇಶ್, ಜಿ.ಎನ್.ಮಹೇಶ್, ಸುಮ ವೀರೇಶ್, ಡಾ.ಗೌರಮ್ಮ, ಪಿ.ಆರ್.ಓ.ನಾಗರಾಜ್ ಸಂಗಂ, ಎಲ್ಲಾ ಕ್ಲಬ್‍ಗಳ ಮತ್ತು ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಬಾಪೂಜಿ, ವಾಸವಿ ಶಾಲೆಯ ನೂರಾರು ಮಕ್ಕಳು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದ್ದರು.
ವಾಸವಿ ಯುವಜನ ಸಂಘದವರು ಜಾಥದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ನೀರಿನ ಪ್ಯಾಕೆಟ್‍ಗಳನ್ನು ವಿತರಿಸಿದರು. ಷಾರವರು ಚಾಕೊಲೇಟ್ ಮತ್ತು ಬಿಸ್ಕತ್‍ಗಳನ್ನು ಮಕ್ಕಳಿಗೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

 

Recent Articles

spot_img

Related Stories

Share via
Copy link