ಪಾವಗಡ;-
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾವಗಡ ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸೋಮವಾರ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಮುತ್ತಿಗೆಯ ನೇತೃತ್ವ ವಹಿಸಿದ್ದ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಬಲ್ಲೇನಹಳ್ಳಿಶ್ರೀರಾಮಯ್ಯ ಮಾತನಾಡಿ, ಫಲಾನುಭವಿಗಳಿಗೆ ಈ.ಎಸ್.ಐ.ಹಾಗೂ ಭವಿಷ್ಯ ನಿಧಿ ಯೋಜನೆ ಜಾರಿಗೆ ತರಬೇಕು, ಮರಣ ಸಹಾಯಧನವನ್ನು ಎಲ್ಲಾ ವಯಸ್ಕರಿಗೂ ಅವರ ಮರಣಾ ನಂತರ ನಾಮಿನಿಗೆ ಸಹಾಯಧನ ನೀಡಬೇಕು ಹಾಗೂ ಗೃಹಬಾಗ್ಯ ಯೋಜನೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು,ಹಾಗೂ ಫಲಾನಭವಿಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಕಾಲಮಿತಿವಿಧಿಸಿದ್ದು, ಅದರೆ ಫಲಾನುಭವಿಗಳ ಸೌಲಭ್ಯ ವಿತರಣೆಗೆ ಮಾತ್ರ ಕಾಲಮಿತಿ ವಿಧಿಸಿಲ್ಲ ಎಂದು ಬೇಸರವ್ಯಕ್ತ ಪಡಿಸಿದರು.
ತಾ. ಕಟ್ಟಡ ಕಾರ್ಮಿಕ ಮುಖಂಡ ಗೌಡೇಟಿ ನಾಗರತ್ನಪ್ಪ ಮಾತನಾಡಿ, ನರೇಗಾ ಯೋಜನೆಯಲ್ಲಿ ಗ್ರಾಮೀಣ ಕಟ್ಟಡ ಕಾರ್ಮಿಕರಲ್ಲದವರನ್ನು ನೋಂದಾಯಿಸಿಕೊಳ್ಳುತ್ತಿರುವುದನ್ನು ಮತ್ತು ಹಬ್ಬಳಿ, ಧಾರವಾಡ ಜಿಲ್ಲೆಗಳಲ್ಲಿ ನರೇಗಾ ಕಾರ್ಮಿಕರಿಗೆ ಗುರ್ತಿನ ಚೀಟಿ ವಿತರಿಸುತ್ತಿರುವುದನ್ನು ಈ ತಕ್ಷಣ ನಿಲ್ಲಿಸಬೇಕು, ಫಲಾನುಭವಿ ಅಪಘಾತ ಪರಿಹಾರ ಧನವನ್ನು 10 ಲಕ್ಷಕ್ಕೆ ಹಾಗೂ ದೊಡ್ಡ ಖಾಯಿಲೆ ಚಿಕಿತ್ಸೆಗೆ 5 ಲಕ್ಷಕ್ಕೆ ಏರಿಸಬೇಕು, ಹೆರಿಗೆ ಭತ್ಯೆ ಸಹಾಯಧನದಲ್ಲಿ ಲಿಂಗತಾರತಮ್ಯ ತೋರದೆ ಏಕ ರೀತಿ ಅನುಷ್ಠಾನಗೊಳಿಸಬೇಕು, ಶೈಕ್ಷಣಿಕ ಸಹಾಯಧನ ಪಡೆಯಲು ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕೆಂಬ ಷರತ್ತನ್ನು ಕೈಬಿಡಬೇಕು, ಮದುವೆ ಧನ ಸಹಾಯ ಪಡೆಯಲು ಕಾಲಮಿತಿಯನ್ನು ಹೆಚ್ಚಿಸಬೇಕು, ಸದಸ್ಯತ್ವ 3 ವರ್ಷಗಳಿಗೊಮ್ಮೆ ನವೀಕರಿಸಲು ಅನುವುಮಾಡಿಕೊಡಬೇಕು, ಯೋಜನೆಯನ್ನು ಬೇರೆ ಬೇರೆ ಜಿಲ್ಲೆಯಲ್ಲಿ ವಿವಿಧ ರೀತಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದನ್ನು ತಪ್ಪಿಸಲು, ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಿ ಏಕ ನೀತಿ ಜಾರಿಗೊಳಿಸಬೇಕು, ಎಂದು ಅಗ್ರಹಿಸಿದರು
ಮುತ್ತಿಗೆಯಲ್ಲಿ ಮುಖಂಡರಾದ ಬ್ಯಾಡನೂರುಶಾಂತವೀರಯ್ಯ, ಶಿವಕುಮಾರ್, ಅಶ್ವನಿ, ರಾಮನಾಯ್ಕ,ಕುಸುಮ, ಜಿ.ಎಸ್. ಚೌಡಪ್ಪ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ,ಅಕ್ಕಲಪ್ಪ, ತಿಮ್ಮಣ್ಣ, ಮತ್ತಿತರರು ಹಾಜರಿದ್ದರು.
ತಹಶೀಲ್ದಾರ್ ವರದರಾಜುಗೆ ಮನವಿ ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








