ದಕ್ಷಿಣ ಪ್ರಾದೇಶಿಕ ನಿಗಾ ಸಮಿತಿಯ 2ನೇ ಸಭೆ

ಬೆಂಗಳೂರು:

       ಘನ ತ್ಯಾಜ್ಯ ನಿರ್ವಹಣೆ ಕುರಿತ ದಕ್ಷಿಣ ಪ್ರಾದೇಶಿಕ ನಿಗಾ ಸಮಿತಿಯ 2ನೇ ಸಭೆ ನಗರದಲ್ಲಿಂದು ನಡೆದಿದ್ದು, ತ್ಯಾಜ್ಯ ನಿರ್ವಹಣೆಗೆ ನವೀನ ಹಾಗೂ ಅತ್ಯುತ್ತಮ ವಿಧಾನಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

        ಘನತ್ಯಾಜ್ಯ ನಿರ್ವಹಣೆ ಕಾನೂನುಗಳ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಪರಾಮರ್ಶಿಸಲಾಯಿತು, ಅಲ್ಲದೇ, ದೇಶದೆಲ್ಲೆಡೆ ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ, ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನುಷ್ಠಾನದ ಉಸ್ತುವಾರಿಗೆ ನ್ಯಾಯಮೂರ್ತಿ ಪಿ. ಜ್ಯೋತಿಮಣಿ ಅಧ್ಯಕ್ಷತೆಯಲ್ಲಿ ದಕ್ಷಿಣ ಪ್ರಾದೇಶಿಕ ನಿಗಾ ಸಮಿತಿ ರಚಿಸಲಾಗಿದೆ.

         ಇಂದಿನ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ಹಾಗು ಲಕ್ಷದ್ವೀಪಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

          ಬಳಿಕ ನ್ಯಾಯಮೂರ್ತಿ ಪಿ. ಜ್ಯೋತಿಮಣಿ ಮಾತನಾಡಿ, ಘನ ತ್ಯಾಜ್ಯ ನಿರ್ವಹಣಾ ನಿಯಮ 2016 ರ ನಿಯಮದ ಅಧಿಸೂಚನೆಯಂತೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ , ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

           ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ದಕ್ಷಿಣ ರಾಜ್ಯಗಳಲ್ಲಿ ಆಯಾ ರಾಜ್ಯಗಳ ನಿಯಮಾವಳಿ ರೂಪಿಸಬೇಕಾಗಿದೆ. ಬಿಬಿಎಂಪಿ ರೂಪಿಸಿರುವ ಮಾದರಿಯಲ್ಲಿಯೇ ದೇಶದ ಇತರೆ ರಾಜ್ಯಗಳು ನಿಯಮಾವಳಿ ಅಳವಡಿಸಬಹುದಾಗಿದೆ. ಪ್ರದೇಶಗಳಲ್ಲಿ ಒಂದೇ ಕಡೆ ಘನತ್ಯಾಜ್ಯಗಳ ಘಟಕಗಳನ್ನು ಪ್ರಾರಂಭಿಸುವ ಬದಲು ಜನವಸತಿ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಘಟಕಗಳನ್ನು ಪ್ರಾರಂಭಿಸಿದರೆ ಘನತ್ಯಾಜ್ಯ ವಿಲೇವಾರಿ ಸುಲಭವಾಗುತ್ತದೆ ಎಂದು ಸಲಹೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link