ಶಿಕ್ಷಕರಲ್ಲಿ ಮಕ್ಕಳನ್ನು ಪ್ರೀತಿಸುವ ಗುಣ ಇರಬೇಕು

ಚಿತ್ರದುರ್ಗ;

         ಶಾಲೆಯಲ್ಲಿ ಕೇವಲ ಪಾಠ ಬೋಧನೆ ಮಾಡದೆ ಮಕ್ಕಳನ್ನು ಪ್ರೀತಿಸುವ ಗುಣ ಶಿಕ್ಷಕರು ಬೆಳಸಿಕೊಳ್ಳಬೇಕು ಎಂದು ಡಯಟ್‍ನ ಹಿರಿಯ ಉಪನ್ಯಾಸಕ ಭರಮ್ಮಪ್ಪ ಮೈಸೂರು ಹೇಳಿದರು.

          ನಗರದ ಬಾಪೂಜಿ ಸಭಾಂಗಣದಲ್ಲಿ ಸೋಮವಾರ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ ಹತ್ತು ಬೆಳದಿಂಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

         ಶಿಕ್ಷಕ ನಾಲ್ಕು ಗೋಡೆಗಳ ಮಧ್ಯ ಪಾಠ ಮಾಡದೆ ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅವರಿಗೆ ಹೊಸ ವಿಷಯಗಳನ್ನು ಹೇಳಿಕೊಡಬೇಕು. ಆಗ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಯಾವುದೇ ಶಾಲೆ ಮುಚ್ಚುವ ಪರಿಸ್ಥಿತಿ ಬರುವುದಿಲ್ಲ ಎಂದರು

        ಜಗತ್ತಿನಲ್ಲಿ ಅತ್ಯಂತ ಬೆಲೆಯುಳ ವಸ್ತು ಎಂದರೆ ಗುಣ. ಅದನ್ನು ನಿಮಿಂದ ಯಾರು ಕಸೆದುಕೊಳ್ಳಲ್ಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ಶಿಕ್ಷಕ ತನ್ನ ಚಾಪ್ಪು ಬಿಟ್ಟಿರುತ್ತಾರೆ. ಕೆಲ ಶಿಕ್ಷಕರ ಕೈ ಬರಹ, ಅವರ ಮಾತಿನ ಶೈಲಿ, ಅವರ ಉಡಿಗೆತೊಡಿಗೆ, ಅವರ ಸ್ವಭಾವ ಪ್ರಭಾವ ಬಿರುತ್ತದೆ. ಶಿಕ್ಷಕರು ಸರಳತೆಯಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು. ಶಿಕ್ಷಕರು ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಅದರಿಂದ ಮಕ್ಕಳಿಗೆ ಸಹಾಯವಾಗುವಂತೆ ಮಾಡಬೇಕು ಎಂದರು.

       ಡಯಟ್‍ನಲ್ಲಿ ನಾನಾ ವಿಭಾಗಗಳಿವೇ ಅದರಲ್ಲಿ ಸೇವಾ ಪೂರ್ವ ಶಿಕ್ಷಕರ ತರಬೇತಿ, ಸೇವಾ ನಿರತ ಶಿಕ್ಷಕರ ತರಬೇತಿ, ಸ್ಥಳಿಯ ವಿಭಾಗ, ಶಿಕ್ಷಣ ತಂತ್ರಜ್ಞಾನ ವಿಭಾಗ, ಭಾಷಾ ವಿಭಾಗ, ಮಾನವಿಕ ವಿಭಾಗದಿಂದ ನಾನಾ ತರಬೇತಿ ಕಾರ್ಯಗಾರಗಳು ಆಯೋಜಿಸಲಾಗುತ್ತಿದೆ. ಡಯಟ್‍ನಿಂದ ರಾಷ್ಟ್ರೀಯ ಜನ ಸಂಖ್ಯಾ ಕಾರ್ಯಕ್ರಮ, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ವಿಚಾರ ಗೋಷ್ಠಿ, ಪ್ರಬಂಧ ಸ್ಪರ್ಧೆ ಕಾರ್ಯಕ್ರಗಳು ನಡೆಯುತ್ತವೆ.

        ಶಿಕ್ಷಕರಿಗೆ ನಲಿಕಲಿ, ವಿಜ್ಞಾನ ಗಣಿತ, ಗುರು ಚೇತನ್, ಶಾಲಾ ನಾಯಕತ್ವ, ಕ್ರೀಯಾ ಸಂಶೋಧನೆ, ಶಿಕ್ಷಣದಲ್ಲಿ ರಂಗಕಲೆ, ಕಂಪ್ಯೂಟರ್ ಶಿಕ್ಷಣ ತರಬೇತಿ ಕಾರ್ಯಕ್ರಮಗಳು ನಡೆಯುತ್ತವೆ. ರಾಜ್ಯದಲ್ಲಿ ಒಟ್ಟು 6 ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಕಾರ್ಯ ನಿರ್ವಹಿಸುತ್ತಿವೆ ಎಂದು ಡಯಟ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

         ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಶಿಕ್ಷಕರಿಗೆ ತಾಳ್ಮೆ, ಸಹನೆ ಮುಖ್ಯ. ಶಿಕ್ಷಕರಿಗೆ ಎರಡು ಮಾರ್ಗಗಳಿವೆ ಒಂದು ಕತ್ತಲೆಯ ಮಾರ್ಗ ಇನ್ನೊಂದು ಬೆಳಕಿನ ಮಾರ್ಗ. ನೀವು ಸರಯಾದ ಮಾರ್ಗ ಆಯ್ದುಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು. ಇಂದು ಜನ ವಸ್ತುಗಳಿಗೆ ಬೆಲೆಕೊಡುತ್ತಿದ್ದಾರೆ. ಮೌಲ್ಯಗಳು ಕಳೆದು ಹೋಗಿವೆ ಎಂದರು.

        ಚಿತ್ರದುರ್ಗ ಕ್ಷೇತ್ರ ಸಂಪನ್ಮೂಲಾಕಾರಿ ಸಿ.ಈಶ್ವರಪ್ಪ, ಬಾಪೂಜಿ ದೂರಶಿಕ್ಷಣದ ಸಂಯೋಜನಾಕಾರಿ ಎ.ಎಂ.ರುದ್ರಪ್ಪ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಜಯಲಕ್ಷ್ಮೀ, ಕೆ.ಎಂ.ಎಸ್.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಜಂಬುನಾಥ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap