ದೇವರ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳು ಶ್ರೇಯೋಭಿವೃದ್ಧಿಗೆ ರಹದಾರಿ

ಚಳ್ಳಕೆರೆ

        ಕಳೆದ ಹಲವಾರು ದಶಕಗಳಿಂದ ನಾಡಿನ ಎಲ್ಲಾ ಸಮುದಾಯದ ಜನರು ಧಾರ್ಮಿಕ ಕಾರ್ಯಗಳಲ್ಲಿ ತಾವು ನಂಬಿರುವ ರೀತಿಯೇ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಲ್ಲಿ ಯಶಸ್ಸಿಯಾಗಿದ್ಧಾರೆ. ನಾವು ಮಾಡುವ ದೇವರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಮ್ಮೆಲ್ಲರ ಬದುಕಿಗೆ ಹೊಸ ಶಕ್ತಿ ಹಾಗೂ ಚೈತನ್ಯವನ್ನು ತುಂಬುತ್ತವೆ ಎಂದು ಶ್ರೀಕ್ಷೇತ್ರ ಕಾಗಿನೆಲೆ ಗುರುಪೀಠದ ಆಡಳಿತಾಧಿಕಾರಿ, ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ತಿಳಿಸಿದರು.

        ಅವರು, ತಾಲ್ಲೂಕಿನ ಟಿ.ಎನ್.ಕೋಟೆ ಗ್ರಾಮದಲ್ಲಿ ಅಲ್ಲಿನ ಭಕ್ತರು ಹಾಗೂ ಗ್ರಾಮಸ್ಥರು ನಿರ್ಮಿಸಿದ ಶ್ರೀಮೈಲಾರಲಿಂಗೇಶ್ವರ ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಕ್ಷೇತ್ರದ ಶಾಸಕರ ಅಭಿವೃದ್ಧಿ ಕಾಳಜಿಗೆ ಉತ್ತಮ ಉದಾಹಣೆಯಾಗಿವೆ.

        ಕೇವಲ ಅಭಿವೃದ್ಧಿಯಷ್ಟೇಯಲ್ಲ ಈ ಕ್ಷೇತ್ರ ಧಾರ್ಮಿಕ ವಿಚಾರಗಳಲ್ಲೂ ಸಹ ವಿಶೇಷ ವೈಶಿಷ್ಟ್ಯತೆಯನ್ನು ಹೊಂದಿದೆ. ತಾಲ್ಲೂಕಿನ ನಾಯಕನಹಟ್ಟಿ ಗುರುತಿಪ್ಫೇರುದ್ರಸ್ವಾಮಿ, ಗೌರಸಮುದ್ರ ಶ್ರೀಮಾರಮ್ಮ ದೇವಿಜಾತ್ರೆ, ದೊಡ್ಡ ಉಳ್ಳಾರ್ತಿ ಗೌರಿದೇವಿ, ಪರಶುರಾಮಪುರ ಹೋಬಳಿಯ ಕ್ಯಾತಪ್ಪನ ಜಾತ್ರೆ ಇಲ್ಲಿನ ಭಕ್ತರಲ್ಲಿ ದೇವರ ಬಗ್ಗೆ ಅಡಗಿರುವ ಭಕ್ತಿಯನ್ನು ತೋರುತ್ತದೆ ಎಂದರು.

       ಪ್ರಾರ್ಥನ ಮಂದಿರ ಹಾಗೂ ಪ್ರಸಾದ ನಿಲಯದ ಉದ್ಘಾಟನೆಯನ್ನು ನೆರವೇರಿಸಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನಾನು ಸದಾಕಾಲ ದೇವರು ಹಾಗೂ ದೈವತ್ವವನ್ನು ನಂಬಿ ಕೆಲಸ ಮಾಡುವವನು. ಈ ಕ್ಷೇತ್ರದ ಅಭಿವೃದ್ಧಿಗೆ ನನಗೆ ಹೆಚ್ಚು ಶಕ್ತಿ ಹಾಗೂ ಚೈತನ್ಯ ನೀಡಿರುವುದು ಈ ಕ್ಷೇತ್ರದ ಎಲ್ಲಾ ದೇವರುಗಳೇ.

         ನನಗೆ ಯಾವುದೇ ಪ್ರದೇಶದಲ್ಲಿ ದೇವರ ಕಾರ್ಯಗಳಲ್ಲಿ ಭಾಗವಹಿಸಲು ಹೆಚ್ಚು ಸಂತಸ ವೆನ್ನಿಸುತ್ತದೆ. ಹೆಚ್ಚಿನ ಆತ್ಮತೃಪ್ತಿಯೂ ಸಹ ಇಂತಹ ಪುಣ್ಯ ಕಾರ್ಯಗಳಿಂದ ಲಭಿಸುತ್ತದೆ. ಇಲ್ಲಿನ ಭಕ್ತರು ಅತಿ ಹೆಚ್ಚಿನ ಭಕ್ತಿ ಭಾವನೆಗಳನ್ನು ಹೊಂದಿದ್ಧಾರೆ. ಅವರಲ್ಲಿ ಉತ್ತಮ ಮನಸ್ಸು ಮನೆ ಮಾಡಿದೆ.

         ಹಾಗಾಗಿ ಕೇವಲ ಕೆಲವೇ ತಿಂಗಳುಗಳಲ್ಲಿ ಲಕ್ಷಾಂತರ ಮೌಲ್ಯದ ದೇವಸ್ಥಾನ ನಿರ್ಮಾಣವಾಗಿ ಉದ್ಘಾಟನೆಯಾಗಿದೆ. ಈ ಕ್ಷೇತ್ರದ ಎಲ್ಲಾ ಸಮುದಾಯಕ್ಕೂ ದೇವರು ನೆಮ್ಮದಿ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

        ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು ಮಾತನಾಡಿದರು. ದೇವಸ್ಥಾನದ ಆಡಳಿತ ಮಂಡಳಿತ ಅದ್ಯಕ್ಷರಾದ ಮಂಜುಳಾ ಎಂ.ಶಿವಲಿಂಗಪ್ಪ, ಆಡಳಿತ ಮಂಡಳಿಯ ಪರವಾಗಿ ಗಣ್ಯರನ್ನು ಗೌರವಿಸಿದರು. ಪೂಜಾ ಕಾರ್ಯಕ್ರಮಗಳನ್ನು ವೇದ ಬ್ರಹ್ಮ ಅನಂತರಾಮ್ ಗೌತಮ್, ನಾಗಶಯನಗೌತಮ್ ನಡೆಸಿಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap