ಬೆಂಗಳೂರು:
ದೇಶದಲ್ಲಿ ಉದ್ಯಾನ ನಗರಿ ,ತಂತ್ರಜ್ಞಾನದ ತವರು ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ಈಗ ಹೊಸ ಪಟ್ಟದತ್ತ ಮುನ್ನುಗುತ್ತಿದೆ ಅದೇ ಪುತ್ತಳೀಗಳ ನಗರ ಎಂದು ಕರೆಯುವ ಕಾಲ ಸನಿಹದಲ್ಲೇ ಇದೆ.ಹೆಚ್ಚಿನ ಸಂಖ್ಯೆಯಲ್ಲಿ ಕೆರೆ ಹಾಗೂ ಉದ್ಯಾನಗಳಿದ್ದ ಬೆಂಗಳೂರಿನಲ್ಲಿ ಈಗ ಪ್ರತಿಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ,
ಹಿಂಸಾತ್ಮಕ ಪ್ರತಿಭಟನೆಗಳ ವೇಳೆ ಈ ಪ್ರತಿಮೆಗಳ ರಕ್ಷಣೆ ಜವಾಬ್ದಾರಿ ನಗರ ಪೊಲೀಸರ ಹೆಗಲ ಮೇಲೆ ಬಿದ್ದಿದೆ. ಹಲವು ಸಮುದಾಯಗಳ ಜನತೆ ಹಾಗೂ ಸಂಘಟನೆಗಳು ಮತ್ತು ರಾಜಕಾರಣಿಗಳು ಪ್ರತಿಮೆ ನಿರ್ಮಾಣ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಾರೆ, ಬೆಂಗಳೂರಿನಲ್ಲಿರುವ ಪ್ರತಿಮೆ ಬಹುತೇಕ ಕಂಚಿನದ್ದಾಗಿವೆ. ಮೊದಲು ಕೇವಲ ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿದ್ದವು ,
ಆದೆ ಇತ್ತೀಚೆಗೆ ಎಲ್ಲಾ ಸಮುದಾಯದವರು ತಮ್ಮ ಸಮುದಾಯದ ಮಹಾತ್ಮರ ಪ್ರತಿಮೆ ನಿರ್ಮಿಸಲು ಮುಂದಾಗುತ್ತಿದ್ದಾರೆ . ಪ್ರತಿಭಟನೆಗಳ ಸಮಯದಲ್ಲಿ ಈ ಪ್ರತಿಮೆಗಳಿಗೆ ರಕ್ಷಣೆ ಕೊಡುವುದು ಪೊಲೀಸರ ಜವಾಬ್ದಾರಿಯಾಗಿದೆ. ಇಂದು ಗುಜರಾತ್ ನಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಪ್ರತಿಮೆ ಲೋಕಾರ್ಪಣೆಯಾಗುತ್ತಿದೆ . ಈ ವೇಳೆ ಬೆಂಗಳೂರಿನಲ್ಲಿರುವ ಪ್ರತಿಮೆಗಳು ಹಾಗೂ ಅವುಗಳ ನಿರ್ಮಾಣದ ವೆಚ್ಚದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ. ಕೆಲ ವರ್ಷಗಳ ಹಿಂದೆ ಗಾಂಧಿನಗರದ ಸಮೀಪವಿರುವ ಸಿಟಿ ರೈಲ್ವೆ ನಿಲ್ದಾಣದ ಬಳಿ ಇದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಮಂದ ಖಡ್ಗ ತೆಗೆದುಕೊಳ್ಳಲು ವಿಫಲ ಯತ್ನ ನಡೆಸಲಾಗಿತ್ತು.
ಮತ್ತು ಹಲವೆಡೆ ಅವೈಜ್ಞಾನಿಕವಾಗಿ ನಿರ್ಮಿಸಲಾದ ಪ್ರತಿಮೆಗಳಿಂದ ಜಮರಿಗೆ ಕಿರಿಕಿರಿ ಉಂಟಾಗುತ್ತಿದೆ ಇದನ್ನು ಸರಿಪಡಿಸಲು ಬಿಬಿಎಂಪಿಗೆ ಜನ ಆಗ್ರಹಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ