ಇಂದಿರಾಗಾಂಧಿ ಪುಣ್ಯತಿಥಿಯಂದೇ ಬಿಬಿಎಂಪಿಯಲ್ಲಿ ಇಂದಿರಾ ಕ್ಯಾಂಟಿನ್ ಆಹಾರಕ್ಕೆ ಎಳ್ಳು ನೀರು…!!!

ಬೆಂಗಳೂರು

         ಉಕ್ಕಿನ ಮಹಿಳೆ, ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯತಿಥಿ ದಿನದಂದೇ ಬಿಬಿಎಂಪಿಯಲ್ಲಿ ಇಂದಿರಾ ಕ್ಯಾಂಟಿನ್ ಆಹಾರಕ್ಕೆ ಎಳ್ಳು ನೀರು ಬಿಡಲಾಗಿದೆ.

         ಆರ್ಥಿಕ ವಿತವ್ಯಯದ ಉದ್ದೇಶದಿಂದ ಹಿಂದಿನ ಮೇಯರ್ ಸಂಪಂತ್ ರಾಜ್ ಊಟದ ಹೊರೆಯನ್ನು ತಗ್ಗಿಸಲು ಪಾಲಿಕೆ ಸಭೆಗಳಿಗೆ ಇಂದಿರಾ ಕ್ಯಾಂಟೀನ್ ಊಟವನ್ನು ತರಿಸಲಾಗುವುದು ಎಂದು ಘೋಷಿಸಿದ್ದರು.

         ಅದರಂತೆಯೇ ಕಳೆದ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟ ಮತ್ತು ರುಚಿಯ ಕುರಿತಂತೆ ತಿಳಿಯಲು ಕ್ಯಾಂಟಿನ್ ಆಹಾರವನ್ನು ತರಿಸಲಾಗಿತ್ತು. 500 ಜನಕ್ಕೆ ಆಗುವಷ್ಟು ಊಟವು ಪಾಲಿಕೆ ಆವರಣಕ್ಕೆ ಬಂದಿತ್ತು. ಮೇಯರ್ ಗಂಗಾಂಬಿಕೆ ಸೇರಿದಂತೆ ಕೇವಲ 200 ಜನರು ಈ ಆಹಾರವನ್ನು ಸೇವಿಸಿ ಅಪಾರ ಪ್ರಮಾಣದ ಆಹಾರ ನಷ್ಟ ಮಾಡಿದ್ದರು. ಬಿಜೆಪಿ ಸದಸ್ಯರು ಇಂದಿರಾ ಕ್ಯಾಂಟಿನ್ ಆಹಾರ ಸ್ವೀಕರಿಸಲು ನಿರಾಕರಿಸಿದ್ದರು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

         ಬಿಜೆಪಿ ಸದಸ್ಯರು ಆಹಾರ ಸೇವಿಸದ ಕಾರಣ ಇಂದಿನ ಸಭೆಗೆ ಇಂದಿರಾ ಕ್ಯಾಂಟೀನ್‍ನ ಊಟ, ಉಪಹಾರಕ್ಕೆ ಕೊಕ್ ನೀಡಲಾಗಿತ್ತು. ಕೌನ್ಸಿಲ್ ಸಭೆಯಲ್ಲಿ ಸದಸ್ಯರಿಗೆ ಚಿಪ್ಸ್, ಬಿಸ್ಕೆಟ್ ವಿತರಣೆ ಮಾಡಲಾಗಿತ್ತು. ಇಂದಿರಾ ಕ್ಯಾಂಟೀನ್ ಊಟ ಒಂದೇ ದಿನಕ್ಕೆ ಸಾಕಾಗಿ ಹೋಗಿದೆ. ವಿಶೇಷ ಎಂದರೆ ಇಂದಿರಾಗಾಂಧಿ ಅವರ ಪುಣ್ಯತಿಥಿಯಂದು ಇಂದಿರಾ ಕ್ಯಾಂಟಿನ್ ಆಹಾರ ವಿತರಣೆ ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

        ಇಂದಿರಾ ಕ್ಯಾಂಟಿನ್ ಊಟಕ್ಕೆ ಹೆದರಿ ಕಾರ್ಪೋರೇಟರ್‍ಗಳು ಕೌನ್ಸಿಲ್ ಸಭೆಗೆ ಗೈರಾಗಿದ್ದಾರೆ ಎಂಬ ಗುಸು ಗುಸು ಸಹ ಕೇಳಿಬರುತ್ತಿದೆ. ಗಂಗಾಂಬಿಕೆ ಅವರು ಮೇಯರ್ ಆದ ಮೊದಲ ಸಭೆಗೆ ಬಿಬಿಎಂಪಿ ಸದಸ್ಯರು ನಿರಾಸಕ್ತಿ ತೋರಿದ್ದಾರೆ. ಮೊನ್ನೆ ಸಭೆ ಪ್ರಾರಂಭವಾದರೂ ಉಪಮೇಯರ್ ರಮಿಳಾ ಉಮಾಶಂಕರ್ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ ಇಂದಿಗೆ ಸಭೆ ಮುಂದೂಡಲಾಗಿತ್ತು. ಹಾಗಾಗಿ ಇಂದು ಮೊದಲ ಸಭೆಯಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap