ಬೆಂಗಳೂರು:
ನಾವು ದೇಶದ ನಿಯತ್ತಿನ ನಾಯಿಗಳು.ಕಾಂಗ್ರೆಸ್‍ನವರಂತೆ ಗುಲಾಮಗಿರಿಯ ನಾಯಿಗಳಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಶಿವಮೊಗ್ಗ ನಗರದಲ್ಲಿ ನಡೆದಿದ್ದ ಮೈತ್ರಿ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಮುಂದೆ ನಾಯಿ ಮರಿಗಳಂತೆ ಇರುತ್ತಾರೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ,ಹೌದು ನಾವು ದೇಶಕ್ಕೆ ನಿಯತ್ತಿನಿಂದಿರುವ ನಾಯಿಗಳು.ಗುಲಾಮಗಿರಿಯನ್ನು ಒಪ್ಪಿಕೊಂಡ ವರಲ್ಲ,ಸಿದ್ದರಾಮಯ್ಯನವರು ಒಂದು ಕುಟುಂಬದ ಗುಲಾಮ ಗಿರಿಯಲ್ಲಿ ಇರುವಂತಹವರು.ಅದಕ್ಕಾಗೇ ಅವರ ಮನೋಭಾವನೆ ಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿರಬೇಕು ಎಂದು ಟಾಂಗ್ ಕೊಟ್ಟರು.
ನಾವು ಕುಟುಂಬದ ಹಿತ ಕಾಯುವ ನಾಯಿಗಳಲ್ಲ.ನಾವು ದೇಶದ ಹಿತ ಬಯಸುವ ನಾಯಿಗಳು.ಒಂದು ಕುಟುಂಬದ ರಾಜ ಕೀಯ ಹಿತ ಕಾಯುವವರಲ್ಲ.ಒಂದು ಕುಟುಂಬದ ಹಿತ ಕಾಯುವ ಬದಲು, ದೇಶದ ಹಿತ ಕಾಯುವ ನಾಯಿಗಳಾಗಿರುವುದು ಮೇಲು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ