ಚೇಳೂರು
ತೆಂಗು ಬೆಳೆಯುವ ರೈತರು ಎಲ್ಲಾರೂ ಸಂಘಟಿತರಾಗಿ ಹೋರಾಟ ಮಾಡಿದರೆ ಬೇರೆ ರಾಜ್ಯಗಳು ಪಡೆದುಕೊಳ್ಳುವಂತಹ ಸಹಾಯ ಧನಗಳನ್ನು ನಮ್ಮ ರಾಜ್ಯದ ರೈತರು ಸಹ ಪಡೆಯಲು ಸಾಧ್ಯವಾಗುತ್ತದೆ ಎಂದು ಅಖಿಲ ಭಾರತ ತೆಂಗು ಬೆಳೆಗಾರರ ಸಂಘದ ನಿರ್ದೇಶಕ ಜಕ್ಕೂರು ಪುಲಕೇಶಿ ತಿಳಿಸಿದರು.
ಇವರು ಚೇಳೂರಿನ ಪಟೇಲ್ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ತೆಂಗು ಬೆಳೆಗಾರರ ಮಹಾಮಂಡಲಿ ಮತ್ತು ಕರ್ನಾಟಕ ರಾಜ್ಯ ತೆಂಗು ಬೆಳೆಗಾರರ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈಗಾಗಾಲೇ ಒಕ್ಕೂಟದ ವತಿಯಿಂದ ತೆಂಗಿನ ಕಾಯಿಯಲ್ಲಿ ಪೌಡರ್ ಮಾಡಿ ಪಾಕೇಟ್ ಮಾಡಿ ಎಕ್ಸ್ಪೋರ್ಟ್ ಮಾಡುತ್ತಿದ್ದೇವೆ ಎಲ್ಲಾ ರೈತರು ಇದೇ ರೀತಿ ಸಹಕಾರ ನೀಡಿದರೆ ಹೆಚ್ಚು ಲಾಭಗಳಿಸಲು ಸಾದ್ಯವಾಗುತ್ತದೆ.
ತೆಂಗನ್ನು ರೈತರು ಎಷ್ಟು ಕಷ್ಟ ಬೆಳೆದರರು ಸಹ ಕೇಲವು ಸಂದರ್ಭದಲ್ಲಿ ಸರಿಯಾದ ಬೆಲೆ ಸೀಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ತೆಂಗು ಬೆಳೆಗಾರರು ಹಳ್ಳಿಯಿಂದ ಹಿಡಿದು ರಾಜ್ಯದವರೆಗೆ ಸಂಘಟಿತರಾಗಿ ಕೇಂದ್ರಸರ್ಕಾರ ಮೇಲೆ ಒತ್ತಡ ತಂದು ತೆಂಗಿನ ಬೆಳೆಗೆ ಬರುವಂತಹ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕಾಗಿದೆ. ಜೊತೆಗೆ ರೈತರು ಎಳನೀರು, ತೆಂಗಿನ ಕಾಯಿ, ಕೊಬ್ಬರಿ, ಹಾಗೂ ಕೊಬ್ಬರಿ ಪೌಡರ್ ಗಳಿಗೆ ಹೆಚ್ಚಿನ ಬೆಲೆ ಸೀಗಲು ಸಂಘಟಿತರಾಗ ಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲಿ ರಾಜ್ಯ ತೆಂಗು ಬೆಳೆಗಾರರ ನಿರ್ದೇಶಕ ಮುತ್ತಣ್ಣ, ಸಿ.ಎನ್.ತಿಮ್ಮೇಗೌಡ್ ಗಾಂಧೀ ಪ್ರತಿಭಾ ಪುರಸ್ಕøತ ಶ್ರೀನಿವಾಸ್, ಜಿಲ್ಲಾ ಸಾವಯಾವ ಕೃಷಿಕ ಶಾಂತಪ್ಪ,. ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷರಾದ ಸಿದ್ದೇಶ್ವರ ಮಾತನಾಡಿದರು.ಪ್ರಗತಿಪರ ರೈತರಾದ ಕೆ,ಎಸ್,ರಂಗಸ್ವಾಮಯ್ಯ, ಕೆ,ಕೆ ಬಸವರಾಜು, ನಟರಾಜು, ಸಿ,ಎನ್,ಮೇಲೆಗೌಡ, ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ