ತುರುವೇಕೆರೆ:
ಕೆರೆ ಸಿಂಚನ ಯೋಜನೆಯಡಿಯಲ್ಲಿ ಸುಮಾರು 10 ಲಕ್ಷ ವ್ಯಚ್ಚದಲ್ಲಿ ಸಾರಿಗೆಹಳ್ಳಿ ಕೆರೆಯನ್ನು ಸಂಪೂರ್ಣ ಅಭಿವೃದ್ದಿ ಪಡಿಸಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ಸಾರಿಗೆಹಳ್ಳಿ ಕರೆ ತುಂಬಿದ ಹಿನ್ನಲೆ ಗುರುವಾರ ಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಹಮ್ಮಿಕೊಂಡಿದ್ದ ಗಂಗಾಪೂಜೆ ಕಾರ್ಯಕ್ರಮದಲ್ಲಿ ಬಾಗಿಣ ಅರ್ಪಿಸಿ ಮಾತನಾಡಿದ ಅವರು ತಾಲೂಕಿನ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಆಗಮಿಸದ ರೈತರಿಗೆ ದನ್ಯವಾದಗಳನ್ನು ಅರ್ಪಿಸುತ್ತಿದ್ದು. ಹೋರಾಟದ ಪಲವಾಗಿ ಇಂದು ಸಾರಿಗೆ ಹಳ್ಳಿ, ಸಂಪಿಗೆ, ವೀರಸಾಗರಕೆರೆಗಳು ತುಂಬಿವೆ.
ಸಿ.ಎಸ್.ಪುರ ಹೋಬಳಿಯಲ್ಲಿ ಹೇಮಾವತಿ ನೀರು ಕಾಣದಂತ ಕೆರೆಗಳಿಗೂ ಈ ಬಾರಿ ನೀರು ಹರಿಸಲಾಗಿದೆ. ವಾಸುದೇವರಹಳ್ಳಿ ಕೆರೆಯಿಂದ ಹೊಸ ಚಾನಲ್ ಮಾಡಿ ಕಲ್ಲೂರು ಕೆರೆಗೆ ನೀರು ಹರಿಸಿದ್ದು ಶೇ 35 ರಷ್ಟು ತುಂಬಿದೆ ಇನ್ನುಳಿದಂತೆ ಕೆರೆಗಳಿಗೂ ನೀರು ಹರಿಯುತ್ತಿದ್ದು ಜಿಲ್ಲಾಡಳಿತದ ವೇಳಾ ಪಟ್ಟಿಯಂತೆ ತಾಲೂಕಿಗೆ ಎರಡು ಹಂತದಲ್ಲಿ 30 ದಿನಗಳು ನೀರು ಹರಿಯಲಿದೆ ರೈತರು ಯಾವುದೇ ಆತಂಕ ಪಡಬೇಕಿಲ್ಲ ರೈತರ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ದಿವ್ಯ ಸಾನಿದ್ಯ ವಹಿಸಿದ್ದ ತಮ್ಮಡಿಹಳ್ಳಿ ವಿರಕ್ತ ಮಠದ ಡಾ. ಅಭಿನವಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿ ಆಶೀರ್ವಚನ ನೀಡಿ ತಾಲೂಕಿನ ರೈತರು ನೊಂದಿದ್ದಾರೆಂದು ಶಾಸಕ ಮಸಾಲ ಜಯರಾಮ್ ಉಪವಾಸ ಮಾಡಿ ಸಾತ್ವಿಕ ಹೋರಾಟದ ಮೂಲಕ ಕೆರೆಗಳನ್ನು ತುಂಬಿಸಿದ್ದಾರೆ. ಪ್ರತಿ ವರ್ಷ ಈ ಬಾಗದಲ್ಲಿನ ಕೆರೆಗಳು ತುಂಬಿ ರೈತರು ಸುಖ, ಶಾಂತಿ, ನೆಮ್ಮದಿದಿಂದ ಬಾಳುವಂತಾಗಲಿ ಎಂದು ಆಶೀಸಿದರು.
ದಿವ್ಯ ಸಾನಿದ್ಯ ವಹಿಸಿದ್ದ ಗೋಡೆಕೆರೆ ಮಠದ ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿ ಆಶೀರ್ವಚನ ನೀಡಿ ಮಾತನಾಡಿ ಮನುಷ್ಯನ ಜೀವನಕ್ಕೆ ಅತೀ ಮುಖ್ಯ ಜಲ ಇಂದು ಜನರು ಅನವಾಶ್ಯಕವಾಗಿ ನೀರನ್ನು ವ್ಯರ್ಥ ಮಾಡುತ್ತಿದ್ದಾರೆ, ಜಲ ಪ್ರಕೃತಿಯ ಕೊಡುಗೆ ಜಲದ ಮೌಲ್ಯವನ್ನು ಅರ್ಥಮಾಡಿಕೊಂಡು ಮಿತವಾಗಿ ಬಳಸುವ ವಿಧಾನವನ್ನು ಕಲಿತುಕೊಂಡು ಪ್ರಕೃತಿದತ್ತವಾದ ಬರುವ ಜಲವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ವಿಶ್ವೇಶ್ವರಯ್ಯ ಮಾತನಾಡಿ ಸಾರಿಗೆಹಳ್ಳಿಕೆರೆ ಏರಿ ದುರಸ್ತಿ, ಕೆರೆಯ ಕೆಳಗಿನ ರಸ್ತೆ, ಕಾಲುವೆಗಳನ್ನು ದುರಸ್ತಿ ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸುಮಾರು 2.80 ಲಕ್ಷ ವ್ಯಚ್ಚದಲ್ಲಿ ಹುಲ್ಲೆಕೆರೆಯಿಂದ ತುರುವೇಕೆರೆವರಗೆ ರಸ್ತೆ ಅಭಿವೃದ್ದಿಗೆ ಹಣ ಮುಂಜೂರಾಗಿದ್ದು ಸದ್ಯದಲ್ಲಿಯೇ ಭೂಮಿ ಪೂಜೆ ಮಾಡಲಾಗುವುದು ಹಾಗೂ ಕೆರೆ ಅಭಿವೃದ್ದಿ ಕಾಲುವೆ ದುರಸ್ಥಿ ಮಾಡಿಸುವ ಬರವಸೆ ನೀಡಿದರು.
ಗಂಗಾ ಪೂಜೆ ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ದುಂಡಾರೇಣಕಪ್ಪ, ಮುಖಂಡರಾದ ಕಡೇಹಳ್ಳಿಸಿದ್ದೇಗೌಡ, ಕೊಂಡಜ್ಜಿವಿಶ್ವನಾಥ್, ಪ್ರಕಾಶ್, ಅನಿತಾನಂಜುಂಡಯ್ಯ, ಜಯಶೀಲಾ, ಯುವ ಮುಖಂಡ ರಕೀತ್, ದಿನೇಶ್, ಸಾ.ಶಿ.ದೇವರಾಜು, ಬಸವೇಶ್, ಹಟ್ಟಿಹಳ್ಳಿಶೇಖರ್, ಜಯಣ್ಣ, ಕಲ್ಲಬೋರನಹಳ್ಳಿ ಮಂಜು, ಶೋಭಕುಮಾರ್, ಸಿದ್ದರಾಮಯ್ಯ, ಉಮೇಶ್, ಪ್ರಸಾಧ್, ಸಿದ್ದು, ಪದ್ಮಾವೆಂಕಟೇಶ್, ಶಿವಪ್ಪ, ಮರಿಯಣ್ಣ, ಶಿವಯೋಗಿಸ್ವಾಮಿ, ರಮೇಶ್, ಸರೋಜಗೌಡರು, ವೀರಭದ್ರಯ್ಯ ದುಂಡ ಸಿದ್ದಲಿಂಗಯ್ಯ, ಜ್ಞಾನೇಶ್, ಮಲ್ಲಿಕಾರ್ಜುನ್, ಪ್ರಭುಮೇಷ್ಟು, ಸಿದ್ದೇಗೌಡ, ಆರಾಧ್ಯ ಸೇರಿದಂತೆ ಮುಖಂಡರು, ನೂರಾರು ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ