ಪಾವಗಡ
ಉದ್ಯೋಗ ಖಾತ್ರಿಯ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಯಾವ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಎಲ್.ಕೆ.ಅತಿಕ್ ಶುಕ್ರವಾರ ಪರಿಶೀಲಿಸಿದರು.
ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿಯಲ್ಲಿ ನಿರ್ಮಾಣಗೊಂಡ ಮಲ್ಟಿ ಆರ್ಚ್ ಚೆಕ್ ಡ್ಯಾಂಗಳನ್ನು ಅಧಿಕಾರಿಗಳ ಜೊತೆ ಪರಿಶೀಲಿಸಿ, ಇಂತಹ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವ್ಯದರಿಂದ ನೀರಿನ ಸ್ಟೋರೇಜ್ ಹೆಚ್ಚಾಗುತ್ತದೆ. ಹಾಗಾಗಿ ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಮಾಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಾಣ ಗೊಂಡ ಚೆಕ್ ಡ್ಯಾಂಗಳ ಬಿಲ್ ಬಾಕಿ ಇದೆ. ಕೆಲವು ಚೆಕ್ ಡ್ಯಾಂಗಳ ನಿರ್ಮಾಣದಲ್ಲಿ ಲೋಪ ವೆಸಗಲಾಗಿದೆ ಎಂಬ ಆರೋಪದ ಮೇರೆಗೆ ಬಿಲ್ ಬಾಕಿ ಇವೆ. ತಾಲ್ಲೂಕಿನಲ್ಲಿ ನಿರ್ಮಾಣಗೊಂಡ ಚೆಕ್ ಡ್ಯಾಂಗಳನ್ನು ಮೂರನೇ ವ್ಯಕ್ತಿ ಮೂಲಕ ತಪಾಸಣೆಗೆ ಒಳಪಡಿಸಿದ ನಂತರ, ತನಿಖೆ ನಡೆಸಿ, ಯಾವುದೇ ಲೋಪವಾಗಿಲ್ಲ ಎಂದು ವರದಿ ಸಲ್ಲಿಸಲಾಗಿದೆ ಎಂಬ ಮಾಹಿತಿ ಪಡೆದು ಉಳಿದ ಬಿಲ್ ಬಿಡಗಡೆ ಮಾಡಲು ಮುಖ್ಯ ಕಾರ್ಯಾನಿವಾಣಾಧಿಕಾರಿಗಳಿಗೆ ತಿಳಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಪಾವಗಡ ತಾಲ್ಲೂಕು ಬರ ಪೀಡಿತ ಪ್ರದೇಶವಾಗಿದ್ದು, ಇಲ್ಲಿನ ಕೂಲಿ ಕಾರ್ಮಿಕರು ವಲಸೆ ಹೋಗದಂತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲು ಹೊಸ ಕಾಮಗಾರಿಗಳು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಖ್ಯ ಎಂಜಿನಿಯರ್ ಸುರೇಶ್, ಇ.ಒ.ಜಿ.ಎನ್. ನರಸಿಂಹಮೂರ್ತಿ, ಎ.ಇ.ಇ ಈಶ್ವರಯ್ಯ, ಎಂಜಿನಿಯರ್ ಬಸವಲಿಂಗಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ