ಕನ್ನಡದಲ್ಲೇ ವ್ಯವಹರಿಸಬೇಕು;ವೀರೇಶ್

ಚಿತ್ರದುರ್ಗ;

        ಪ್ರತಿ ದಿನ ಜೀವನದಲ್ಲಿ ಕನ್ನಡ ಬಾಷೆಯಲ್ಲಿ ವ್ಯವಹರಿಸುವ ಮೂಲಕ ಕನ್ನಡ ಉಳಿಸಿಬೇಳಸಬೇಕು ಎಂದು ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ತಿಳಿಸಿದರು.

        ನಗರದ ಬಾಪೂಜಿ ಸಭಾಂಗಣದಲ್ಲಿ ಗುರುವಾರ ಬಾಪೂಜಿ ಸಮೂಹ ಸಂಸ್ಥೆಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

      ಕನ್ನಡ ಒಂದು ಶ್ರೀಮಂತ ಭಾಷೆ. ಇಲ್ಲಿನ ಕಲೆ, ಸಾಹಿತ್ಯ, ಸಂಸ್ಕøತಿಗೆ ಜಗತ್ತಿನಲ್ಲಿ ಒಂದು ಉನತ್ತ ಸ್ಥಾನವಿದೆ. ಏಳು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ನಮ್ಮದು. ಎಷ್ಟೆ ಬೇರೆ ಭಾಷೆಗಳ ದಾಳಿ ನಡೆದರು ಕನ್ನಡ ಭಾಷೆಗೆ ಯಾವುದೇ ತೊಂದರೆ ಇಲ್ಲ. ಕನ್ನಡ ಭಾಷೆಗೆ ಶತಮಾನಗಳ ಇತಿಹಾಸವಿದೆ ಎಂದರು.

        ಬಾಪೂಜಿ ದೂರಶಿಕ್ಷಣದ ಸಂಯೋಜನಾಕಾರಿ ಎ.ಎಂ.ರುದ್ರಪ್ಪ, ಕೆ.ಎಂ.ಎಸ್.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜುಂಬುನಾಥ್, ಬಿಇಡಿ ಪ್ರಾಚಾರ್ಯೆ ಜಯಲಕ್ಷ್ಮೀ, ಬಾಪೂಜಿ ಶಾಲೆಯ ಸುಧಾ, ಪದ್ಮಾ, ರಾಜೇಶ್ವರಿ, ಜಲಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link