ಕನ್ನಡ ರಾಜ್ಯೋತ್ಸವ : ಸಾಂಸ್ಕೃತಿಕ ಕಾರ್ಯಕ್ರಮ-ಪ್ರಶಸ್ತಿ ಪುರಸ್ಕಾರ

ಕೊರಟಗೆರೆ

        ಪಟ್ಟಣದ ಪಟ್ಟಣ ಪಂಚಾಯ್ತಿ ಮುಂಭಾಗ ನವೆಂಬರ್ 1 ರ ರಾತ್ರಿ ತಾಲ್ಲೂಕ್ ಆಡಳಿತದಿಂದ ಆಯೋಜಿಸಲಾಗಿದ್ದಂತಹ 63 ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

       ತಾಲ್ಲೂಕಿನಲ್ಲಿ ಆಯೋಜನೆಗೊಳ್ಳುವ ನವೆಂಬರ್ 1 ರ ಕನ್ನಡ ರಾಜ್ಯೋತ್ಸವವು ಕಾಲಮಿತಿಯ ಅಭಾವದಿಂದ ಬೆಳಗಿನ ಕಾರ್ಯಕ್ರಮದಲ್ಲಿ ಕೇವಲ ಪಥ ಸಂಚಲನ, ವಿವಿಧ ಸ್ತಬ್ಧ ಚಿತ್ರಗಳ ಪ್ರದರ್ಶನ, ಆಯ್ದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ ರಾಜ್ಯೋತ್ಸವದ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯ ನಾಯಕರುಗಳ ಹಾಗೂ ತಾಲ್ಲೂಕ್ ಅಧಿಕಾರಿಗಳ ಭಾಷಣಕ್ಕೆ ಮಾತ್ರ ಸೀಮಿತಗೊಳಿಸಿ ವಿದ್ಯಾರ್ಥಿಗಳಿಗೆ ಅನನುಕೂಲವಾಗದ ರೀತಿಯಲ್ಲಿ ಬೆಳಗಿನ ಕಾರ್ಯಕ್ರಮವನ್ನು ಅತಿಜರೂರಾಗಿ ಮುಕ್ತಾಯ ಗೊಳಿಸುವ ಕಾರಣ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳ ಸಾಂಸ್ಕತಿಕ ಕಾರ್ಯಕ್ರಮವನ್ನು ಸಂಜೆ ಹಮ್ಮಿಕೊಂಡು ತಾಲ್ಲೂಕ್ ಆಡಳಿತ ತುಂಬಾ ಸುಸೂತ್ರವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

       ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ದಲಿತ ಮುಖಂಡ ಚಿಕ್ಕರಂಗಯ್ಯ ಎಂಬುವರಿಗೆ ಮಾತ್ರ ಭಾಷಣಕ್ಕೆ ಅವಕಾಶ ನೀಡಲಾಗಿ ಸಭೆಯನ್ನು ಉದ್ದೇಶಿಸಿ ಚಿಕ್ಕರಂಗಯ್ಯ ಮಾತನಾಡಿ, ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬೆಳಗ್ಗೆ ಹಾಗೂ ಸಂಜೆಯ ಕಾರ್ಯಕ್ರಮಗಳಾಗಿ ವಿಂಗಡಿಸಿ ತಾಲ್ಲೂಕು ಆಡಳಿತ ತುಂಬಾ ಯಶಸ್ವಿಯಾಗಿ ಕಾರ್ಯಕ್ರಮ ಜರುಗಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಜೆ ಕಾರ್ಯಕ್ರಮ ಆಯೋಜನೆ ಗೊಳಿಸಲಾಗಿದೆ. ಈ ಕಾರ್ಯಕ್ರಮ ಸಹ ತುಂಬಾ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ರಾಜ್ಯೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಇದನ್ನು ನಿತ್ಯೋತ್ಸವವಾಗಿ ಸ್ವೀಕರಿಸಿ ಕನ್ನಡ ನುಡಿ, ನೆಲ, ಜಲ, ಗಡಿ ವಿಚಾರದಲ್ಲಿ ಕನ್ನಡನಾಡಿನ ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಿ ಇವುಗಳ ಉಳಿವಿಗಾಗಿ ಟೊಂಕಕಟ್ಟಿ ನಿಲ್ಲುವ ಅವಶ್ಯಕತೆ ಇದೆಎಂದರು.

       ಕನ್ನಡ ರಾಜ್ಯೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಟ್ಟಣ ವ್ಯಾಪ್ತಿಯ ಥೆರೆಸಾ ಸ್ಕೂಲ್, ರವೀಂದ್ರ ಭಾರತಿ ವಿದ್ಯಾ ಸಂಸ್ಥೆ, ಜೆ ಕೆ ಮೆಮೋರಿಯಲ್ ಸ್ಕೂಲ್, ಚಾಣಕ್ಯ ಸ್ಕೂಲ್, ಜಿ ಜೆ ಸಿ ಕೆ ಸ್ಕೂಲ್ ಹಾಗೂ ರಾಕಿಂಗ್‍ಡ್ಯಾನ್ಸ್ ಸ್ಕೂಲ್ ವತಿಯಿಂದ ಬಹಳ ಸುಂದರವಾಗಿ ಸಂಗೀತ ಕಾರ್ಯಕ್ರಮ ಜನರ ಮನಸೂರೆಗೊಳ್ಳುವಂತೆ ನಡೆಸಿ ಇಡೀ ಸಾಂಸ್ಕತಿಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಮೆರುಗು ನೀಡಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಿಂದ ನಾಗಾರ್ಜುನ ಸಾಗ್ಗೆರೆ (ಪ್ರಜಾ ಪ್ರಗತಿಯ ಜಿಲ್ಲಾ ವರದಿಗಾರ), ಹೆಚ್‍ಆರ್ ಹನುಮಂತರಾಯಪ್ಪ, ಬಿ ಜಿ ಹನುಮಂತರಾಯಪ್ಪ, ವೀರಕ್ಯಾತಪ್ಪ, ರಂಗಭೂಮಿ ಕ್ಷೇತ್ರದಿಂದ ಎನ್ ನರಸಿಂಹಯ್ಯ, ದೊಡ್ಡಯ್ಯ, ಚಿನ್ನರಂಗಯ್ಯ, ಶ್ರೀನಿವಾಸ್, ಹನುಮಂತರಾಯಪ್ಪ, ಲಕ್ಮೀಕಾಂತರಾಜು ಎನ್,ಎ, ಮರಿರಂಗಯ್ಯ,ಕುಂಬಯ್ಯ,ರಾಜಣ್ಣ, ರಂಗಶಾಮಯ್ಯ, ಮಾಧ್ಯಮ ಕ್ಷೇತ್ರದಿಂದ ಜೆಟ್ಟಿಅಗ್ರಹಾರ ನಾಗರಾಜು ಎ ವಿ, ನಾಗರಾಜು ಹೆಚ್‍ಎನ್, ರಾಜು ಕೆ ಜೆ, ಡಾಕ್ಟರೇಟ್ ಕ್ಷೇತ್ರದಿಂದ ಡಾ.ಮಯೂರಗೋವಿಂದರಾಜು, ಡಾ.ಸವಿತ, ಡಾ. ಚೇತನ್, ಕನ್ನಡ ಮಾಧ್ಯಮದಲ್ಲಿ ಎಲ್‍ಎಲ್ ಬಿ ಪದವಿ ಪಡೆದ ಅರುಂಧತಿ ಜೆ. ಸಿ. ಯವರು ಪ್ರಶಸ್ತಿ ಸ್ವೀಕರಿಸಿದರು.

        ಕನ್ನಡ ಪರ ಹೋರಾಟಗಾರರ ಕ್ಷೇತ್ರದಿಂದ ಡಿ ರಮೇಶ್, ಸೈಯ್ಯದ್ ಸೈಫುಲ್ಲಾ ಎಂ ಎಸ್, ಮಹೇಶ್ ಸಿ ವಿ, ಹರೀಶ್ ಬಿ ಸಿ, ರಾಮಕೃಷ್ಣ ಕೆ, ಕೃಷಿ ಕ್ಷೇತ್ರದಿಂದ ಚೌಡಪ್ಪ, ಕ್ರೀಡಾಕ್ಷೇತ್ರದಿಂದ ದೊಡ್ಡರಾಜು, ಅನಿಲ್ ಕುಮಾರ್, ನಿತಿನ್ ನಾಯಕ, ಸಮಾಜ ಸೇವೆಯ ಕ್ಷೇತ್ರದಿಂದ ರವಿಕುಮಾರ್, ಗುಂಡಯ್ಯ ಶೆಟ್ಟಿ (ಮರಣೋತ್ತರ), ರುದ್ರಯ್ಯ, ಮುರುಳಿ(ಫ್ರೆಂಡ್ಸ್‍ಗ್ರೂಪ್), ರಾಮಾಂಜಿನಪ್ಪ, ಕೆ ವಿ ಮಲ್ಲಿಕಾರ್ಜುನಯ್ಯ, ಎನ್ ನರಸಿಂಹಮೂರ್ತಿ, ಶಿಕ್ಷಕರ ಕ್ಷೇತ್ರದಿಂದ ನಾಗರಾಜು, ಚಿಕ್ಕರಂಗಯ್ಯ, ಹನುಮಂತರೆಡ್ಡಿ, ಕೆ ವಿ ತಿಮ್ಮಾಜಮ್ಮ ಪ್ರಶಸ್ತಿ ಸ್ವೀಕರಿಸಿದರು.

         ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಬಲರಾಮಯ್ಯ, ಓಬಳರಾಜು, ನಟರಾಜು, ಸಿಪಿಐ ಮುನಿರಾಜು, ಇಓ ಶಿವಪ್ರಕಾಶ್, ಜಿಪಂ ಎಇಇ ರಂಗಪ್ಪ, ಬಿಇಓ ಚಂದ್ರಶೇಖರ್, ಅಕ್ಷರದಾಸೋಹದರಘು, ಕನ್ನಡ ಸಾಹಿತ್ಯ ಪರಿಷತಅಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡರಾದ ಮೈಲಾರಪ್ಪ, ಗೋವಿಂದರಾಜು, ಸೇರಿದಂತೆಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

 

Recent Articles

spot_img

Related Stories

Share via
Copy link