ಮಹಿಳೆಗೆ ಕಿರುಕುಳ ನೀಡಿದ ಐನಾತಿ ದಂಪತಿಯ ಬಂಧನ

ಬೆಂಗಳೂರು

       ಮಹಿಳೆಯೊಬ್ಬರ ಪತಿಯ ಅನಾರೋಗ್ಯವನ್ನೇ ನೆಪ ಮಾಡಿಕೊಂಡು ಮಹಿಳೆಗೆ ಕಿರುಕುಳ ನೀಡಿದ ಐನಾತಿ ದಂಪತಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

       ಶಿವಾಜಿನಗರದ ಇಮ್ರಾನ್ ಹಾಗೂ ಸೀಮಾ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.ಪತಿ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಇಮ್ರಾನ್ ಬಳಿ ಸಂತ್ರಸ್ಥ ಮಹಿಳೆಯ ಸಹಾಯ ಕೇಳಿದ್ದಾರೆ.ಸಹಾಯ ಮಾಡುವ ನೆಪದಲ್ಲಿ ಸಂತ್ರಸ್ಥೆ ಮನೆಗೆ ಬಂದ ಇಮ್ರಾನ್ ಆಕೆಯ ಲೈಂಗಿಕ ದೌರ್ಜನ್ಯ ವೆಸಗಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಬಳಿಕ ಇಮ್ರಾನ್ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಎಂದು ತಿರುಗಾಡುತ್ತಿದ್ದ ಸೀಮಾ ಖಾನ್ ಎಂಬುವವರ ಜೊತೆ ವಿವಾಹವಾಗಿ ಆಕೆಗೆ ಸೀಮಾಗೆ ತನ್ನ ಅಕ್ರಮ ಸಂಬಂಧದ ವಿಷಯ ತಿಳಿಸಿದ್ದ.

       ಇಬ್ಬರು ಸೇರಿ ಸಂತ್ರಸ್ತ ಮಹಿಳೆಗೆ ಅಕ್ರಮ ಸಂಬಂಧದ ವಿಡಿಯೋ ಇದೆ ಎಂದು ಹೆದರಿಸಿ 8 ಲಕ್ಷ ರೂ. ಹಣ ಪಡೆದು ಮತ್ತಷ್ಟು ಹಣಕ್ಕಾಗಿ ಸಂತ್ರಸ್ಥೆ ಮಹಿಳೆಗೆ ಕಿರುಕುಳ ನೀಡಿದ್ದಾರೆ ನೊಂದ ಮಹಿಳೆ ಶಿವಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ದಂಪತಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link