ಚಾಬಹಾರ್ ಅಭಿವೃಧಿಗೆ ಅಮೇರಿಕ ಗ್ರೀನ್ ಸಿಗ್ನಲ್….!!!

ವಾಷಿಂಗ್ಟನ್ :

        ಭಾರತದ ಸ್ವಾಧೀನದಲ್ಲಿ ಇರುವ ಇರಾನ್ ನ ಚಾಬಹಾರ್ ಬಂದರಿನ ಅಭಿವೃಧಿಗೆ ಇದ್ದ ಎಲ್ಲಾ ನಿರ್ಬಂಧಗಳಿಗೆ ಅಮೇರಿಕ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ ಇದರಿಂದ ಭಾರತದ ಸೇನಾ ಅಭಿವೃಧಿಗೆ ಮತ್ತು ವ್ಯಾಪಾರ ವೃಧಿಗೆ ಸಹಕಾರಿಯಾಗಲಿದೆ ಎಂದು ಪರಿಗಣಿಸಲಾಗಿದೆ  ಆಯಕಟ್ಟಿನ ಪ್ರದೇಶದಲ್ಲಿ ನೆಲೆಗೊಂಡಿರುವ ಚಬಹರ್ ಬಂದರಿನ ಅಭಿವೃದ್ಧಿಗಾಗಿ ಕೆಲವು ನಿರ್ಬಂಧಗಳಿಂದ ಭಾರತಕ್ಕೆ ಅಮೆರಿಕಾ ವಿನಾಯಿತಿ ನೀಡಿದೆ. ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತಕ್ಕೆ  ವಿನಾಯಿತಿ ನೀಡಿದ ನಂತರ ಟ್ರಂಪ್ ಈಗ  ಚಾಬಹರ್ ಬಂದರು ಅಭಿವೃದ್ದಿಯಲ್ಲಿ ಭಾರತದ ಪಾತ್ರವನ್ನು ಮನಗಂಡು ಈ ನಿರ್ಧಾರ ಕೈಗೊಂಡಿದೆ ಎಂದು ಶ್ವೇತಭವನ ತಿಳೀಸಿದೆ . 

      ಅಪ್ಘಾನಿಸ್ತಾನದೊಂದಿಗೆ ರೈಲ್ವೆ ನಿರ್ಮಾಣದ ಜೊತೆಗೆ  ತೈಲ ಆಮದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಾಬಹರ್  ಅಭಿವೃದ್ದಿಗೆ ಭಾರತ ಒಲವು ತೋರಿದ ಹಿನ್ನೆಲೆಯಲ್ಲಿ  2012 ರ ಕೌಂಟರ್ ಪ್ರಸರಣ ಕಾಯ್ದೆಯಡಿ ಇರಾನ್ ಮೇಲೆ ಹೇರಲಾಗಿದ್ದ ಕೆಲ ನಿರ್ಬಂಧಗಳಿಗೆ ಅಮೆರಿಕಾ ರಾಜ್ಯ ಕಾರ್ಯದರ್ಶಿ ವಿನಾಯಿತಿ ನೀಡಿದ್ದಾರೆ ಎಂದು ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link