ಮಗನ ತಪ್ಪಿನಿಂದಾಗಿ ನನ್ನ ಹೆಂಡತಿ ಊಟ, ನಿದ್ರೆ ಮಾಡುತ್ತಿಲ್ಲ : ಲಿಂಗಪ್ಪ

ರಾಮನಗರ:

    ನನ್ನ ಮಗನ ಜತೆ ನಾನು ಸಾಯುವವರೆಗೂ ಮಾತನಾಡುವುದಿಲ್ಲ ಎಂದು  ಪಕ್ಷದ ಟಿಕೆಟ್ ಪಡೆದು  ಅಂತಿಮ ಗಳಿಗೆಯಲ್ಲಿ ರಾಮನಗರ ವಿಧಾನಸಭಾ ಉಪ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಎಲ್​.ಚಂದ್ರಶೇಖರ್​ ತಂದೆ ಸಿ.ಎಂ.ಲಿಂಗಪ್ಪ ತಿಳಿಸಿದ್ದಾರೆ.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಮಗ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ಗೊತ್ತಿಲ್ಲ. ಈ ಬಾರಿಯ ಉಪ ಚುನಾವಣೆಯಲ್ಲಿ ತಮ್ಮ ಮಗ ಎಲ್. ಚಂದ್ರಶೇಖರ್ ದುರಂತ ನಾಯಕನ ಪಾತ್ರ ಮಾಡಿದ್ದಾನೆ. ಇದು ಕ್ಷಮಿಸುವಂತಹ ಅಪರಾಧವಲ್ಲ. ನಾನು ಇಷ್ಟು ವರ್ಷದಿಂದ ಕಟ್ಟಿಕೊಂಡಿದ್ದ ರಾಜಕೀಯ ಸೌಧ ಉರುಳಿಹೋಗಿದೆ. ಎಂದು ಬೇಸರ ವ್ಯಕ್ತಪಡಿಸಿದರು. 

     ಮಗನ ಈ ಕೆಲಸದಿಂದ ನಮ್ಮ ಮನೆಯಲ್ಲಿ ಈವರೆಗೂ ಸೂತಕದ ಛಾಯೆ ಇದೆ. ನನ್ನ ಹೆಂಡತಿ ಬಹಳ ಸೂಕ್ಷ್ಮ. ಊಟ ನಿದ್ರೆ ಮಾಡುತ್ತಿಲ್ಲ. ತೀವ್ರ ಭಾವುಕರಾದಂತೆ ಕಂಡು ಬಂದ ಲಿಂಗಪ್ಪ, ಮಗ ಮಾಡಿದ ತಪ್ಪಿಗೆ ನಾನು ಬಿಜೆಪಿ ಮತ್ತು ಜನತೆಯಲ್ಲಿ ಕ್ಷಮೆ ಕೋರುತ್ತೇನೆ ಎಂದು ಎದ್ದು ನಿಂತು ಕೈ ಮುಗಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ