ತುಮಕೂರು
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಅವರನ್ನು ಅಮಾನತು ಮಾಡಿರುವುದನ್ನು ವಿರೋಧಿಸಿ ತುಮಕೂರು ನಗರದಲ್ಲಿ ಬುಧವಾರ ಬೆಳಗ್ಗೆ ಯುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿ‘ಟನೆ ನಡೆಸಿದರು.
ನಗರದ ಟೌನ್‌ಹಾಲ್ ವೃತ್ತದಿಂದ ಬಿ.ಎಚ್.ರಸ್ತೆಯಲ್ಲಿ ಮೆರವಣಿಗೆ ಮೂಲಕ ನಗರದ ಸರ್ಕಾರಿ ಹೈಸ್ಕೂಲ್ ಎದುರು ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಮನವಿಯನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸುವುದಾಗಿ ರಾಮಕೃಷ್ಣ ‘ರವಸೆ ನೀಡಿದರು.
ಸಾಮೂಹಿಕ ರಾಜಿನಾಮೆ
ರಾಜೇಂದ್ರ ಅವರನ್ನು ಅಮಾನತು ಮಾಡಿರುವುದಕ್ಕೆ ಪ್ರತಿಯಾಗಿ ಯುವ ಕಾಂಗ್ರೆಸ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ ಪ್ರತಿ‘ಟನಕಾರರು, ತಕ್ಷಣವೇ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
2010 ರಿಂದ 2017 ರವರೆಗೂ ರಾಜೇಂದ್ರ ಅವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಮತ್ತು ಶಾಸಕರು ಗೆಲ್ಲಲು ಯುವ ಕಾಂಗ್ರೆಸ್ ಮೂಲಕ ಪ್ರಮುಖ ಪಾತ್ರ ವಹಿಸಿದ್ದಾರೆ. ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರವು ರಾಜ್ಯದಲ್ಲೇ ಎರಡನೇ ಸ್ಥಾನ ಪಡೆಯುವಂತೆ ಮಾಡಿದ್ದರು. ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದಾರೆ. 2013-14 ರಲ್ಲಿ ಯುವ ಕಾಂಗ್ರೆಸ್‌ನ ರಾಷ್ಟೀಯ ಅಧ್ಯಕ್ಷರನ್ನು ಕರೆಸಿ ಆಧಾರ್ ಕಾರ್ಡ್ ಬಗ್ಗೆ ಜಾಗೃತಿ ಮೂಡಿಸಲು ನಾಲ್ಕು ದಿನಗಳ ಕಾಲ 70 ಕಿ.ಮೀ. ಪಾದಯಾತ್ರೆ ಮಾಡಿದ್ದರು. ಕೇಂದ್ರದ ಬಿ.ಜೆ.ಪಿ. ಸರ್ಕಾರದ ಜನವಿರೋಧಿ ನಿಲುವುಗಳ ವಿರುದ್ಧ ಯಶಸ್ವೀ ಪ್ರತಿ‘ಟನೆಗಳನ್ನು ನಡೆಸಿದ್ದಾರೆಂದು ಮನವಿಯಲ್ಲಿ ವಿವರಿಸಲಾಗಿದೆ.
ಇವರ ಸಹಕಾರವಿಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸುವುದು ಕಷ್ಟಕರ ಎಂದು ತಿಳಿಸಿರುವ ಯುವ ಕಾಂಗ್ರೆಸ್ಸಿಗರು, ತಕ್ಷಣ ಇವರ ಅಮಾನತು ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹಾಗೂ ತಮ್ಮಗಳ ಸ್ಥಾನಗಳಿಗೆ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದರು.
ನಗರದ ಶಂಕರ ಮಠ ವೃತ್ತದಲ್ಲಿ ಪ್ರತಿಭಟನಕಾರರು ಕೆಲ ಕಾಲ ಮಾನವ ಸರಪಳಿ ರಚಿಸಿ ಸಾರ್ವಜನಿಕರ ಗಮನವನ್ನೂ ಸೆಳೆದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ಕುಮಾರ್, ಯುವ ಮುಖಂಡರುಗಳಾದ ಶಶಿ ಹುಲಿಕುಂಟೆ ಮಠ್, ಜಿ.ಎನ್.ಮೂರ್ತಿ, ಟಿ.ಆರ್. ಸುರೇಶ್ (ಸೂರಿ), ರಾಘವೇಂದ್ರ, ರಜನೀಶ್, ಅನಿಲ್‌ಕುಮಾರ್, ರಾಜೇಶ್ ದೊಡ್ಡಮನೆ, ಇನಾಯಿತ್ ಸಿಖಂದರ್, ಮೋಹನ್‌ಕುಮಾರ್, ವಿನಯ್, ವಕ್ತಾರ ಟಿ.ಪಿ. ಸುಮಂತ್ ಪ್ರಭಾ, ಶಂಕರನಾರಾಯಣ, ಕಿರಣ್‌ಕುಮಾರ್, ಜಿ.ಆರ್.ರವಿ ಮೊದಲಾದ ಮುಖಂಡರುಗಳು ಪ್ರತಿ‘ಟನೆ ನೇತೃತ್ವ ವಹಿಸಿದ್ದರು. ಸ್ಥಳದಲ್ಲಿ ನಗರ ಡಿವೈಎಸ್ಪಿ ನಾಗರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಗಿ ಭದ್ರತೆ
ಯುವ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಬಿ.ಎಚ್.ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ರಸ್ತೆ ಬದಿಯಲ್ಲೇ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಪೊಲೀಸ್ ವಾಹನದ ಸಮೇತ ಪೊಲೀಸ್ ತಂಡ ಸ್ಥಳದಲ್ಲಿತ್ತು.
ರಾಜೇಂದ್ರ ಸೇರಿ 19 ಜನರ ಅಮಾನತು
ಪ್ರದೇಶ ಯುವ ಕಾಂಗ್ರೆಸ್ ಉಪಾಧ್ಯಕ್ಷ ತುಮಕೂರಿನ ಆರ್.ರಾಜೇಂದ್ರ ಸೇರಿದಂತೆ ಒಟ್ಟು 19 ಜನರನ್ನು ನವದೆಹಲಿಯ ‘ಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್. ರವೀಂದ್ರ ದಾಸ್ ಅಮಾನತುಗೊಳಿಸಿ ನ.5 ರಂದು ಆದೇಶ ಹೊರಡಿಸಿದ್ದಾರೆ. ಇವರ ಜೊತೆಯಲ್ಲಿ ಪ್ರದೇಶ ಯುವ ಕಾಂಗ್ರೆಸ್‌ನ 8 ಜನ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಗ್ರಾಮಾಂತರ, ಬಳ್ಳಾರಿ ಗ್ರಾಮಾಂತರ, ದಕ್ಷಿಣ ಕನ್ನಡ, ಗದಗ, ಕೊಪ್ಪಳ, ಕೊಡಗು, ರಾಮನಗರ, ಹಾಸನದ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷರುಗಳನ್ನು ಸಹ ಅಮಾನತುಗೊಳಿಸಲಾಗಿದೆ. ‘‘ಈ ಪದಾಧಿಕಾರಿಗಳು ಪಕ್ಷದ ಕಾರ್ಯಗಳಲ್ಲಿ ಭಾಗಿಯಾಗುತ್ತಿಲ್ಲ. ಪಕ್ಷದ ನೋಟೀಸ್‌ಗಳಿಗೆ ಉತ್ತರಿಸುತ್ತಿಲ್ಲ. ಕೆಲವರು ಪಕ್ಷದ ಸಭೆಗಳಿಗೆ ಭಾಗವಹಿಸುತ್ತಿಲ್ಲ. ಆದ್ದರಿಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಮುಂದಿನ ನಿರ್ದೇಶನಗಳವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ’’ ಎಂದು ರವೀಂದ್ರ ದಾಸ್ ಸದರಿ ಆದೇಶದಲ್ಲಿ ತಿಳಿಸಿದ್ದಾರೆ.