ಹೊಳಕಲ್ಲು ಗಣೇಶ ಉತ್ಸವದ ಅಂಗವಾಗಿ ಕುಸ್ತಿ ಸ್ಪರ್ಧೆ

ತುಮಕೂರು:

       ತಾಲೂಕಿನ ಹೊಳಕಲ್ಲು ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಶ್ರೀವಿದ್ಯಾಗಣಪತಿಯ 50ನೇ ವರ್ಷದ ಉತ್ಸವದ ಅಂಗವಾಗಿ ಮದಕರಿ ನಾಯಕ ಸೇನೆವತಿಯಿಂದ ಕುಸ್ತಿ ಪಂದ್ಯಾವಳಿ ಹಾಗೂ ಕ್ರೀಡಾಪಟು ಸೈಮನ್ ವಿಕ್ಟರ್ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

      ರಾಜ್ಯದ ಮಂಡ್ಯ,ಮೈಸೂರು,ಚಾಮರಾಜನಗರ,ರಾಮನಗರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳ 26ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿದ್ದು, ಮಂಡ್ಯದ ವಿನಯ್‍ಗೌಡ ಪ್ರಥಮ ಮತ್ತು ದಾವಣಗೆರೆಯ ಬಾಲಗೌಡ ದ್ವಿತೀಯ ಬಹುಮಾನ ಪಡೆದರು.

       ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಮದಕರಿ ನಾಯಕ ಸೇನೆಯ ಜಿಲ್ಲಾಧ್ಯಕ್ಷ ರಂಗನಾಥ ನಾಯಕ,ಕುಸ್ತಿ ಒಂದು ದೇಶಿಯ ಕಲೆಯಾಗಿದ್ದು,ನಮ್ಮ ಹಿರಿಯ ತಲೆಮಾರಿನ ಜನರು ಗರಡಿ ಮನೆಗಳಲ್ಲಿ ಕುಸ್ತಿಗೆ ಬೇಕಾದ ತಯಾರಿ ಮಾಡುವ ಮೂಲಕ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಬಹುಕಾಲ ಜೀವಿಸು ತ್ತಿದ್ದರು.ಆದರೆ ಇಂದಿನ ಅಧುನಿಕ,

        ಶ್ರಮವಿಲ್ಲದ ಜೀವನ ಪದ್ದತಿಯಿಂದಾಗಿ ಬಹುಬೇಗ ವಿವಿಧ ರೀತಿಯ ಖಾಯಿಲೆಗಳಿಗೆ ತುತ್ತಾಗುತ್ತಿದ್ದು,ಮತ್ತೊಮ್ಮೆ ಗರಡಿ ಮನೆಗಳ ಕಡೆಗೆ ಯುವಜನರು ಮುಖ ಮಾಡುವಂತೆ ಮಾಡುವ ಉದ್ದೇಶದಿಂದ ಈ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.ಸ್ಪರ್ಧೆಯಲ್ಲಿ ವಿಜೇತರಾದ ಮಂಡ್ಯದ ವಿನಯ್‍ಗೌಡ ಅವರಿಗೆ 20 ಸಾವಿರ ರೂ ನಗದು ಬಹುಮಾನ ಮತ್ತು ಪಾರಿತೋಷಕ, ಹಾಗೆಯೇ ಎರಡನೇ ಬಹುಮಾನ ಪಡೆದ ದಾವಣಗೆರೆಯ ಬಾಲುಗೌಡ ಅವರಿಗೆ 10 ಸಾವಿರ ನಗದು ಹಾಗೂ ಪಾರಿತೋಷಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದರು.

         ಕಾರ್ಯಕ್ರಮದಲ್ಲಿ ಚಲನಚಿತ್ರ ನಟರು ಹಾಗೂ ದೇಹದಾಡ್ಯ ಪಟುವಾದ ಅರ್ಜುನ್ ಪಾಳ್ಳೆಗಾರ ಹಾಗೂ ಸೈಮನ್ ವಿಕ್ಟರ್ ಅವರನ್ನು ಮದಕರಿ ನಾಯಕ ಸೇನೆ ವತಿಯಿಂದ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಮದಕರಿ ನಾಯಕಸೇನೆಯ ಹೆಬ್ಬಾಕ ಮೂರ್ತಿ , ಹಾಗಲವಾಡಿ  ಶಂಕರ್,ಬಾಲರಾಜ್ ಚೇಳೂರು,ಹೊಳಕಲ್ಲು ಗ್ರಾ.ಪಂ. ಉಪಾಧ್ಯಕ್ಷ ಕಿರಣ್, ಗ್ರಾಮದ ಮುಖಂಡರಾದ ಅಜ್ಜಪ್ಪ, ಹಮ್ಮೀದ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link