ಬೆಂಗಳೂರು:
ಅವಧಿ ಮೀರಿ ನಡೆಸುತ್ತಿದ್ದ ಮಾಹಿತಿ ಆಧರಿಸಿ ನಗರದ ಸ್ಯಾಂಕಿ ರಸ್ತೆಯ ಮೆರಿಡಿಯನ್ ಹೋಟೆಲ್‍ನ ಶುಗರ್ ಫ್ಯಾಕ್ಟರಿ ಪಬ್ ಮೇಲೆ ಸಿಸಿಬಿ ಪೊಲೀಸರು ತಪಾಸಣೆ ನಡೆಸಿ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ನೊಟೀಸ್ ಜಾರಿಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಪಾಲುದಾರಿಕೆಯ ಶುಗರ್ ಫ್ಯಾಕ್ಟರಿ ಪಬ್‍ನ್ನು ಕಳೆದ ಶನಿವಾರ ತಪಾಸಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಪಬ್‍ನ ಪಾಲುದಾರರಾಗಿರುವ ಸ್ಮಿತಾ ಅವರಿಗೆ ಆಬಕಾರಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಿ 10 ದಿನಗಳೊಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.
ಲೀ ಮೆರಿಡಿಯನ್ ಹೋಟೆಲ್‍ನಲ್ಲಿ ಸ್ಮಿತಾ ರಾಕೇಶ್ ಪಾಲುದಾರಿಕೆಯ`ಶುಗರ್ ಫ್ಯಾಕ್ಟರಿ’ ಹೆಸರಿನ ಪಬ್ ನಡೆಸುತ್ತಿದ್ದರು ಈ ಪಬ್ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಮುಂಜಾನೆ 4ರವರೆಗೆ ತರೆದಿರುವುದು ತಪಾಸಣೆ ವೇಳೆ ಪತ್ತೆಯಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ನಿಯಮದ ಪ್ರಕಾರ ರಾತ್ರಿ 1 ಗಂಟೆವರೆಗೂ ಮಾತ್ರ ಪಬ್‍ಗಳು ತೆರೆಯಬಹುದು.ಆದರೆ ಶುಗರ್ ಫ್ಯಾಕ್ಟರಿ ಪಬ್ ಅವಧಿ ಮೀರಿ ರಾತ್ರಿ 3 ಗಂಟೆವರೆಗೂ ತೆಗೆಯಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಹತ್ತು ದಿನಗಳ ಒಳಗಾಗಿ ನೋಟಿಸ್‍ಗೆ ಉತ್ತರ ನೀಡದಿದ್ದರೆ ಪಬ್ ಮುಚ್ಚಿಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಕೈ ಮೇಲುಗೈಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಕಡಿವಾಣ ಹಾಕಲು ತಪಾಸಣೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ