ಬೆಂಗಳೂರು
ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ದೊಡ್ಡಮ್ಮನ ಮನೆಯಲ್ಲಿ ಊಟ ಮುಗಿಸಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದ ಹೋಗುತ್ತಿದ್ದ ಖಾಸಗಿ ಶಾಲೆಯ ದೈಹಿಕ ಶಿಕ್ಷಕರೊಬ್ಬರು ಮೃತಪಟ್ಟಿರುವ ದುರ್ಘಟನೆ ಪೀಣ್ಯಾ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ದಾಸನಪುರದ ರಾಕೇಶ್ (23) ಎಂದು ಗುರುತಿಸಲಾಗಿದೆ.ಉಲ್ಲಾಳದ ವಿದ್ಯಾನಿಕೇತನ ಸ್ಕೂಲ್‍ನಲ್ಲಿ ದೈಹಿಕ ಶಿಕ್ಷಕರಾಗಿದ್ದ ರಾಕೇಶ್ ದೊಡ್ಡಜಾಲದ ದೊಡ್ಡಮ್ಮನ ಮನೆಗೆ ಹೋಗಿ ಭಾನುವಾರ ರಾತ್ರಿ 9.30ರ ವೇಳೆ ಊಟ ಮುಗಿಸಿಕೊಂಡು ಪಲ್ಸರ್ ಬೈಕ್‍ನಲ್ಲಿ ಮನೆಗೆ ಬರುತ್ತಿದ್ದರು.
ಮಾರ್ಗಮಧ್ಯೆ ಪೀಣ್ಯಾದ ನವಯುಗ ಟೋಲ್ ಬಳಿ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೆÇಲೀಸರು, ಕ್ಯಾಂಟರ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
