ಬೆಂಗಳೂರು 
ಕಾಲು ಕಳೆದುಕೊಂಡ ಅಶಕ್ತರಿಗೆ ‘ಒಂದು ಸಾವಿರ ರೂಪಾಯಿ ದೇಣಿಗೆ ನೀಡಲು ಮುಂದೆ ಬನ್ನಿ ‘ ಎಂಬ ಘೋಷಣೆಯೊಂದಿಗೆ ಕೃತಕ ಕಾಲು ಜೋಡಣೆಗೆ ನೆರವಾಗಿ ಎಂದು ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಸಂಸ್ಥೆ ಸಾರ್ವಜನಿಕರನ್ನು ವಿನಂತಿಸಿದೆ.
38ನೇ ಆವೃತ್ತಿಯ ವಾರ್ಷಿಕ ಕೃತಕ ಕಾಲು ಜೋಡಣೆ ದೇಣಿಗೆ ಯೋಜನೆ ಕಾರ್ಯಕ್ರಮವು ಸೋಮವಾರ ಭಗವಾನ್ ಜೈನ್ ಆಸ್ಪತ್ರೆ ಯಲ್ಲಿ ನೆರವೇರಿತು.
ಕಳೆದ ಹಲವು ವರ್ಷಗಳಿಂದ ಈ ಸಂಸ್ಥೆಯು ಜಂಟಿಯಾಗಿ ಸಾವಿರಕ್ಕೂ ಹೆಚ್ಚು ಅಶಕ್ತರಿಗೆ ಕ್ರತಕ ಕಾಲು ಜೋಡಣೆ ಮಾಡಿ ಸಮಾಜದಲ್ಲಿ ಉತ್ತಮ ಅಭಿಪ್ರಾಯ ಮೂಡಿಸುವಂತೆ ಮಾಡಿದೆ. 38ನೇ ವಾರ್ಷಿಕ ಯೋಜನೆ ಯಲ್ಲಿ ಒಟ್ಟು 8,50,000 ರೂಪಾಯಿ ದೇಣಿಗೆ ಸಂಗ್ರಹವಾಗಿದ್ದು, ಇದರಿಂದ 800 ಅಶಕ್ತರಿಗೆ ಕೃತಕ ಕಾಲು ಜೋಡಣೆಗೆ ನೆರವಾಗಲು ಅನುಕೂಲವಾಗಿದೆ.
ಈ ಯೋಜನೆ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ ‘ ಉತ್ತಮ ಸಮಾಜವನ್ನು ರೂಪಿಸಲು ಈ ಕಾರ್ಯಕ್ಕೆ ಯಾವುದೇ ಸಂಕೋಚವಿಲ್ಲದೆ ಎಲ್ಲರು ಸಹಾಯ ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲೇಡಿಸ್ ಸರ್ಕಲ್ ಮುಖ್ಯಸ್ಥೆ ಆರತಿ ಗುಪ್ತಾ ಮಾತನಾಡಿ ಅಶಕ್ತರನ್ನು ಸಬಲೀಕರಣಗೊಳಿಸಲು ಸಾವಿರ ರೂಪಾಯಿ ದೇಣಿಗೆ ನೀಡಲು ಮುಂದೆ ಬಂದಿರುವ ಸದಸ್ಯರು ಹಾಗೂ ಸಾರ್ವಜನಿಕರನ್ನು ಕಂಡು ಭವಿಷ್ಯದಲ್ಲಿ ಮತ್ತಷ್ಟು ಯೋಜನೆಗೂ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಬ್ಬ ಮುಖ್ಯ ಅತಿಥಿಯಾದ ರೋಟರಿಯನ್ ಧೀರಜ್ ಬಜಾಜ್ ಮಾತನಾಡಿ ಕ್ರತಕ ಕಾಲು ಜೋಡಣೆಗೆ ದೇಣಿಗೆ ನೀಡಲು ಮುಂದಾಗಿ ಜನರು ಮುಂದಾಳತ್ವ ವಹಿಸಿದ್ದು ಸಂತಸದ ವಿಚಾರ ಎಂದರು.ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಸಂದೀಪ್ ಬೋಥಿರೆಡ್ಡಿ ವಹಿಸಿದ್ದರು. ಗೋಲ್ಡಿ ಬೋಥಿರೆಡ್ಡಿ ಕಾರ್ಯಕ್ರಮದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








