ಗಂಡನನ್ನೇ ಕೊಲೆಗೈದ ಪತ್ನಿ ಬಂಧನ

ಚಿಕ್ಕನಾಯಕನಹಳ್ಳಿ

         ಪತ್ನಿಯೇ ತನ್ನ ಗಂಡನನ್ನು ಕೊಲೆ ಮಾಡಿ ಹಳ್ಳಕ್ಕೆ ಎಸೆದಿರುವ ಘಟನೆ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಆಸ್ತಿವಿಚಾರವಾಗಿ ಪತಿಯನ್ನು ಕೊಲೆ ಮಾಡಿರುವ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

          ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ನಿವಾಸಿ ಗಂಗಾಧರಯ್ಯ ಕೊಲೆಯಾಗಿರುವ ದುರ್ದೈವಿ. ಮೃತ ಗಂಗಾಧರಯ್ಯನಿಗೆ ಇಬ್ಬರು ಹೆಂಡತಿಯರಿದ್ದು ವೈಯಕ್ತಿಕ ದ್ವೇಷದಿಂದಾಗಿ ತನ್ನ ಗಂಡನನ್ನೇ ಕೊಲೆ ಮಾಡಿರುವ ಶಂಕೆ ಪೊಲೀಸರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಮೊದಲ ಹೆಂಡತಿ ಶಾಂತಮ್ಮನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

          ಮೃತನ ತಂದೆ ತಿಮ್ಮಯ್ಯನಿಗೆ, ಗಂಗಾಧರಯ್ಯ ಒಬ್ಬನೇ ಮಗನಾಗಿದ್ದು ಈತ ಶಾಂತಮ್ಮನನ್ನು ಮೊದಲನೆ ವಿವಾಹವಾಗಿದ್ದ, ನಂತರ ಜಯಮ್ಮ ಎಂಬುವವರನ್ನು ಎರಡನೇ ಮದುವೆಯಾಗಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದ. ಶಾಂತಮ್ಮನಿಗೆ ಒಬ್ಬ ಮಗಳು, ಜಯಮ್ಮನಿಗೆ ಒಬ್ಬ ಮಗನಿದ್ದರು. ಮೃತ ಗಂಗಾಧರಯ್ಯ ಆಸ್ತಿವಂತರಾಗಿದ್ದ ಎರಡೂ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದನೆಂದು ಪೊಲೀಸರಿಂದ ತಿಳಿದು ಬಂದಿದೆ.

           ಇತ್ತೀಚೆಗೆ ಶಾಂತಮ್ಮನ ಮಗಳನ್ನು ವಿವಾಹ ಮಾಡಿಕೊಡಲಾಗಿತ್ತು. ಆ ನಂತರ ಶಾಂತಮ್ಮ ಮತ್ತು ಜಯಮ್ಮನ ನಡುವೆ ಆಸ್ತಿ ವಿಚಾರವಾಗಿ ಕ್ಷುಲ್ಲಕ ವಿಚಾರಗಳಿಗೆ ಸಣ್ಣಪುಟ್ಟ ಘರ್ಷಣೆಗಳು ಆಗ್ಗಿಂದಾಗ್ಗೆ ಆಗುತ್ತಿದ್ದವು ಎಂದು ಸ್ಥಳೀಯರಿಂದ ತಿಳಿದು ಬಂದಿದೆ. ಕಳೆದ ಭಾನುವಾರ ರಾತ್ರಿ ಸೋಮನಹಳ್ಳಿಗೆ ಸುಮಾರು 1.ಕಿ.ಮೀ. ದೂರದ ತೋಟದ ಬಳಿ ಗಂಗಾಧರಯ್ಯನನ್ನು ಕೊಲೆಗೈಯ್ಯಲಾಗಿದೆ. ಸ್ಥಳದಲ್ಲಿ ಮೃತವ್ಯಕ್ತಿಯ ಚಪ್ಪಲಿ, ಪಂಚೆ, ಮೊಬೈಲ್ ಪತ್ತೆಯಾಗಿದೆ.

           ಮೃತ ವ್ಯಕ್ತಿಯನ್ನು ಚಿ.ನಾ.ಹಳ್ಳಿ-ತಿಪಟೂರು ಗಡಿ ಭಾಗದ ಕಟ್ಟೆಕಳೆವು ಗಡಿ ಹಳ್ಳದಲ್ಲಿ ಎಸೆದು ಹೋಗಿದ್ದು ಸೋಮವಾರ ಬೆಳಗ್ಗೆ ದಾರಿಹೋಕರಿಂದ ಪೊಲೀಸರಿಗೆ ಸುದ್ದಿ ತಲುಪಿದೆ. ಸ್ಥಳಕ್ಕೆ ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್, ಕೆ.ಬಿ.ಕ್ರಾಸ್‍ನ ತನಿಖಾಧಿಕಾರಿ ರಾಮ್‍ಪ್ರಸಾದ್, ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ಸುರೇಶ್, ಪಿಎಸ್‍ಐ ಟಿ.ಹೆಚ್.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link