ಅನಂತ್‍ಕುಮಾರ್ ನಿಧನದಿಂದ ನಾವೆಲ್ಲರೂ ಅನಾಥರಾಗಿದ್ದೇವೆ

ಹಿರಿಯೂರು :

        ಭಾರತೀಯ ಜನತಾ ಪಕ್ಷದ ಹಿರಿಯ ಹಾಗೂ ಕೇಂದ್ರ ಸರ್ಕಾರದ ಸಚಿವ ಅನಂತ್‍ಕುಮಾರ್ ನಿಧನದಿಂದ ರಾಜ್ಯ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಬಿಜೆಪಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

          ಆನಂತಕುಮಾರ್ ಅವರು ಆರ್‍ಎಸ್‍ಎಸ್ ಜೊತೆ ಹಾಗೂ ಎಬಿವಿಪಿಯಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ 1996ರಲ್ಲಿ ಮೊದಲಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಉತ್ತಮ ವಾಗ್ಮಿಗಳು, ಲೋಕಸಭೆಯಲ್ಲಿ ಹಾಗೂ ವಿಶ್ವಸಂಸ್ಥೆಯಲ್ಲೂ ಕನ್ನಡದಲ್ಲಿ ಮಾತನಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬಡವರಿಗೆ ಅನುಕೂಲವಾಗಲೆಂದು ಜನೌಷಧಿ ಯೋಜನೆ ಜಾರಿಗೆ ತಂದವರೂ ಇವರೇ ಆಗಿದ್ದಾರೆ ಎಂದರು.

          ಇವರು ಆರು ಬಾರಿ ಸತತ ಸಂಸದರಾಗಿ ಆಯ್ಕೆ ಆಗಿದ್ದರು. ಮೋದಿ ಸರ್ಕಾರದಲ್ಲಿ ರಸಗೊಬ್ಬರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರೈತರಿಗೆ ಯೂರಿಯಾ ಸಿಗದೇ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದಾಗ ರೈತರಿಗೆ ಸಿಗುವಂತೆ ಅನುಕೂಲ ಮಾಡಿಕೊಟ್ಟವರು ಇವರೇ, ಇಂತಹ ಹಿರಿಯ ನಾಯಕರನ್ನು ಕೆಳೆದುಕೊಂಡು ನಾವೆಲ್ಲರೂ ಅನಾಥರಾಗಿದ್ದೇವೆ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂಬುದಾಗಿ ಪೂರ್ಣಿಮಾಶ್ರೀನಿವಾಸ್ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link