ದೆಹಲಿ:

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ದೇಶದ ಶಕ್ತಿ ಕೇಂದ್ರ ದೆಹಲಿಯ ವಸಂತ್ ಕುಂಜ್ ನ ಅಪಾರ್ಟಮೆಂಟ್ ವೊಂದರಲ್ಲಿ ವಾಸವಾಗಿದ್ದ ಮಾಲಾ ಲಖನಿ ಮತ್ತು ಆಕೆಯ ಮನೆಕೆಲಸದಾಕೆಯನ್ನು ದುಷ್ಕರ್ಮಿಗಳು ಕೊಂದಿರುವ ಘಟನೆ ಇಂದು ಬೆಳ್ಳಿಗೆ ಬೆಳಕಿಗೆ ಬಂದಿದೆ ಇದರಿಂದ ರಾಜಧಾನಿಯ ಜನ ತೀವ್ರ ಭಯಭೀತರಾಗಿದ್ದಾರೆ ಎಂದು ವರದಿಗಳು ತಿಳೀಸಿವೆ .
ಇಂದು ಬೆಳ್ಳಿಗೆ ಮೂರು ಗಂಟೆ ಸುಮಾರಿಗೆ ಮಾಲಾ ಲಖನಿ ಮನೆಯಿಂದ ಜೋರಾಗಿ ಗಲಾಟೆಗಳು ಕೇಳಿಸುತ್ತಿದ್ದವು ಅದನ್ನು ಕೇಲಿಸಿಕೊಂಡ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ ಎಂದು ತಿಳಿಸಲಾಗಿದೆ .
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಹತ್ಯೆ ಮಾಡಿದ ಆರೋಪಿ ಮತ್ತು ಅವನ ಸಹಚರರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ . ಅವರು ಬುಧವಾರ ರಾತ್ರಿ ಸುಮಾರು 10.00 ಗಂಟೆಗೆ ಲಖಿನಿ ಅವರ ಮನೆಗೆ ಕೆಲವು ಬಟ್ಟೆಗಳ ವಿನ್ಯಾಸಗಳನ್ನು ತೋರಿಸಲು ಹೋದಾಗ ಮಾತಿಗೆ ಮಾತು ಬೆಳೆದು ಲಿಖನಿಯವರನ್ನು ರಾಹುಲ್ ಕತ್ತಿಯಿಂದ ಇರಿದು ಕೊಂದಿದ್ದಾನೆ ನಂತರ ಮನೆಯ ಕೆಲಸದವರು ನಡೆದಿದ್ದನ್ನು ಎಲ್ಲಿಯಾದರು ಹೇಳಿಯಾರು ಎಂಬ ಕಾರಣಕ್ಕೆ ಅವರನ್ನು ಸಹ ಮುಗಿಸಿ ಹೋಗಿದ್ದಾರೆ ನಂತರದಲ್ಲಿ ಅವರು ಹತ್ತಿರದ ಪೊಲೀಸ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
