ಬೆಂಗಳೂರು
ಕನ್ನಡ ಚಿತ್ರ ರಂಗದ ಯಶಸ್ವಿ ನಿರ್ದೇಶಕ ಶಂಕರ್ ಸುಗ್ನಳ್ಳಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ . ನಿನ್ನೆ ರಾತ್ರಿ ಸುಮಾರು 12 ಘಂಟೆಗೆ ವೈದ್ಯರು ಸುಗ್ನಳ್ಳಿ ಅವರ ಸಾವಿನ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಶಂಕರ್ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ .ಕಳೆದ ಕೆಲ ತಿಂಗಳುಗಳಿಂದ ಸುಗ್ನಳ್ಳಿ ಅವರು ಹೆಚ್ ಒನ್ ಎನ್ ಒನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ನಾಲ್ಕು ಜನ ಮಕ್ಕಳನ್ನು ಬಿಟ್ಟು ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ