ಮಕ್ಕಳಿಗಾಗಿ ಜಾರಿಗೆ ತಂದಿರುವ ಕಾನೂನುಗಳನ್ನು ಮಕ್ಕಳಿಗೆ ತಿಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ

ಹಿರಿಯೂರು :

         ಮಕ್ಕಳಿಗಾಗಿ ಜಾರಿಗೆ ತಂದಿರುವ ಕಾನೂನುಗಳನ್ನು ಮಕ್ಕಳಿಗೆ ತಿಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಇಂದು ಎಲ್ಲದಕ್ಕೂ ಕಾನೂನಿನ ಅವಶ್ಯಕತೆದೆ ಎಂಬುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಸಂತೋಷ್.ಎಸ್.ಪಲ್ಲೇದ್ ಹೇಳಿದರು.

        ನಗರದ ವಾಗ್ದೇವಿ ವಿದ್ಯಾಸಂಸ್ಥೆಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾಸಮಿತಿ, ತಾಲ್ಲೂಕು ವಕೀಲರಸಂಘ, ಸಾರ್ವಜನಿಕ ಶಿಕ್ಷಣಇಲಾಖೆ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಬಾಲನ್ಯಾಯ ಕಾಯ್ದೆ -2016 ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ರಾಷ್ಟ್ರೀಯ ಕಾನೂನು ಸೇವೆಗಳ ಉದ್ದೇಶವಾಗಿದೆ.

         ಹಲವು ಸಾಲಭ್ಯಗಳಿಂದ ವಂಚಿತರಾದವರಿಗೆ ಅವುಗಳು ಸಿಗುವಂತೆ ಮಾಡುವುದೆ ಈ ಕಾರ್ಯಕ್ರಮದ ಗುರಿಯಾಗಿದೆ ಎಂದರಲ್ಲದೆ ಸರ್ಕಾರಗಳು ಇಂತಹ ವರ್ಗದವರನ್ನು ಗುರುತಿಸಿ ಅವರಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದರು.

          ಹಿರಿಯ ವಕೀಲರಾದ ಶ್ರೀಮತಿ ಎಂ.ಮೀನಾಕ್ಷಿ ನವರು ಮಾತನಾಡಿ ಮಕ್ಕಳ ಬಾಲ್ಯಜೀವನ ಎಂಬುವುದು ಒಂದು ಸುಂದರಬದುಕು, ನಾವು ಮಕ್ಕಳಿಗೆ ಬಾಲ್ಯವಿವಾಹವನ್ನು ಮಾಡುವ ಮೂಲಕ ಅವರ ಸುಂದರಬದುಕನ್ನು ಕಿತ್ತುಕೊಳ್ಳಬಾರದು ಎಂದರಲ್ಲದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಬೇಕು ಇಂತಹ ಕಾನೂನುಗಳು ಮಕ್ಕಳ ಭವಿಷ್ಯಕ್ಕಾಗಿ ರೂಪಿಸಲಾಗಿದೆ ಎಂದರು.

        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಗ್ದೇವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಶ್ರೀಧರ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಶ್ರೀಮತಿ ಸಿ.ಎನ್.ಮುನಿರತ್ನಮ್ಮ ಹಾಗೂ ಬಸವರಾಜು, ವಕೀಲರ ಸಂಘದ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ನಟರಾಜ್, ವಕೀಲರುಗಳಾದ ಟಿ.ಜಗದೀಶ್, ಟಿ.ಧೃವಕುಮಾರ್, ಮೋಹನ್‍ಕೃಷ್ಣ, ಇಸಿಒ ಹರೀಶ್, ಮುಖ್ಯಶಿಕ್ಷಕ ಹೆಚ್.ಸಿ.ಶರಣಪ್ಪ ಹಾಗೂ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link