ಕಬ್ಬು ಬೆಳೆಗಾರರ ಸಂಕಷ್ಟ ಸಂಪೂರ್ಣ ನಿವಾರಣೆಯಾಗಲಿದೆ : ಸಚಿವ ಬಂಡೆಪ್ಪ ಖಾಶೆಂಪುರ

ಬೆಂಗಳೂರು : –

ದುಸ್ಥಿತಿಗೆ ತಲುಪಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ಸುಸ್ಥಿತಿಗೆ ತರಲು ರಾಜ್ಯ ಸರ್ಕಾರ ಶ್ರಮಿಸಲಿದ್ದು ರಾಜ್ಯ ಸರ್ಕಾರದ ಜೊತೆಗೆ ಸಹಕಾರಿಗಳು ಕೈಜೋಡಿಸಬೇಕು ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಅವರು ತಿಳಿಸಿದರು.
ರಾಜ್ಯದ 37 ಸಕ್ಕರೆ ಕಾರ್ಖಾನೆಗಳಲ್ಲಿ 7 ಮಾತ್ರ ಚಾಲ್ತಿಯಲ್ಲಿದ್ದು ಉಳಿದೆಲ್ಲವೂ ದುಸ್ಥಿತಿಗೆ ತಲುಪಿವೆ ಇವುಗಳನ್ನು ಸುಸ್ಥಿತಿಗೆ ತಂದರೆ ಕಬ್ಬು ಬೆಳೆಗಾರರ ಸಂಕಷ್ಟ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಹೇಳಿದರು.

ನೆರೆಯ ಮಹಾರಾಷ್ಟ್ರದಲ್ಲಿನ ಸಕ್ಕರೆ ಕಾರ್ಖಾನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಆದಾಯದ ಮೂಲಗಳಾಗಿವೆ ಇಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಉಂಟಾಗಲು ರಾಜ್ಯ ಸರ್ಕಾರದ ಜೊತೆಗೆ ಸಹಕಾರಿ ಬ್ಯಾಂಕ್‍ಗಳು ಸಹಕಾರಿಗಳ ಸಹಕಾರ ಮುಖ್ಯ ಎಂದು ತಿಳಿಸಿದರು.

ನಗರದ ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಶನಿವಾರ 65ನೇ ಅಖಿಲಭಾರತ ಸಹಕಾರ ಸಪ್ತಾಹ-2018 ಹಾಗೂ ಸಾರ್ವಜನಿಕ, ಖಾಸಗಿ, ಸಹಕಾರಿ ಸಹಭಾಗಿತ್ವ ನಿರ್ಮಾಣ” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಗಳನ್ನು ಸುಸ್ಥತಿಗೆ ತರಲು ಶಕ್ತಿಮೀರಿ ಶ್ರಮಿಸಲಾಗುವುದು ಎಂದರು.

ಸಹಕಾರ ಕ್ಷೇತ್ರ ಎಂದರೆ ಜನರ ಸಹಭಾಗಿತ್ವ ದಲ್ಲಿ ನಡೆಯುವ ಕ್ಷೇತ್ರ.ಹೀಗಾಗಿ, ಗ್ರಾಮೀಣ ಬ್ಯಾಂಕ್ ಅಭಿವೃದ್ಧಿ ಮತ್ತು ಹೊಸ ಯೋಜನೆಗಳನ್ನು ರೂಪಿಸಲು ನಾವು ತಯಾರಿ ನಡೆಸುತ್ತಿದ್ದೇವೆ.ಈ ಕ್ಷೇತ್ರ ಬೆಳೆಸಲು ಎಲ್ಲರ ಸಹಕಾರ ಅತಿ ಅಗತ್ಯವಾಗಿದೆ ಸಹಕಾರ ಇಲಾಖೆಯ ಗ್ರಾಮೀಣ ಮತ್ತು ಪಟ್ಟಣ ಬ್ಯಾಂಕ್ ಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸಹಕಾರಿ ಕ್ಷೇತ್ರ ಸದೃಢಸಹಕಾರ

ಪಟ್ಟಣ ಬ್ಯಾಂಕ್ ಪ್ರಗತಿಯಲ್ಲಿ ಗುಜರಾತ್ ನಂತರ, ಕರ್ನಾಟಕ ಸಹಕಾರಿ ಕ್ಷೇತ್ರ ಸದೃಢವಾಗಿದೆ. 307 ಪಟ್ಟಣ ಸಹಕಾರಿ ಬ್ಯಾಂಕ್ ನಲ್ಲಿ 31 ಸಾವಿರ ಕೋಟಿ ಠೇವಣಿ 18 ಕೋಟಿ ಸಾವಿರಗೂ ಅಧಿಕ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಆಪೆಕ್ಸ್ ಡಿಸಿಸಿ ಮೊದಲಾದ ಬ್ಯಾಂಕ್‍ಗಳು ಸರ್ಕಾರದ ಜತೆ ಹೊಂದಾಣಿಕೆಯಿಂದ ಇರಬೇಕು. ಸರ್ಕಾರದ ಡೆಪೆಸಿಟ್ ರಾಷ್ಟ್ರೀಕೃತ ಬ್ಯಾಂಕ್ ಜತೆ ಸಹಕಾರಿ ಬ್ಯಾಂಕ್ ನಲ್ಲೂ ಠೇವಣಿ ಇಡಲು ರಾಜ್ಯ ಸರ್ಕಾರ ಗಂಭಿರ ಚಿಂತನೆ ನಡೆಸಿದೆ ಎಂದು ನುಡಿದರು.

ಹಳ್ಳಿ ಯಲ್ಲಿ ಸಾಲವ್ಯಾಪ್ತಿ ಹೆಚ್ಚಬೇಕು. ಅನುಕೂಲಕ್ಕಾಗಿ ಸಾಲ ನೀಡಿದಷ್ಟು ಅವರು ಬೆಳವಣಿಗೆ ಆಗುತ್ತದೆ ಎಂದ ಅವರು, ತೆಂಗಿನ ನಾರಿನ ಮಹಾ ಮಂಡಳಿ ಪುನಶ್ಚೇತನ
ಕ್ಕೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದ ಅವರು, ಇಡೀ ದೇಶದಲ್ಲೇ 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಇದು ನಮ್ಮ ರಾಜ್ಯದಲ್ಲಿ ಮಾತ್ರ ಮಾಡಿದ್ದು, ಇದರ ಸಂಪೂರ್ಣ ಲಾಭವನ್ನು ರೈತ ವರ್ಗ ಪಡೆಯುವಂತೆ ಆಗಬೇಕೆಂದು ನುಡಿದರು.

ಬಟ್ಟೆ ಕಾರ್ಖಾನೆ
ಬೀದರ್ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಬಟ್ಟೆ ತಯಾರಿಕಾ ಕಾರ್ಖಾನೆ ಸ್ಥಾಪಿಸಲಾಗುವುದು. ಈ ಸಂಬಂಧ ಈಗಾಗಲೇ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಅಂತರ್ಗತ ಬೆಳವಣಿಗೆ ಈ ಬಾರಿಯ ಸಪ್ತಾಹದ ಘೋಷ ವಾಕ್ಯವಾಗಿದೆ ಎಂದರು. ಶಾಸಕ ಎಸ್.ರವಿ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ ಪಾಲ್ಗೊಂಡಿದ್ದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link