ವಿಕಲಚೇತನ ಮಕ್ಕಳನ್ನು ಎಲ್ಲಾ ಮಕ್ಕಳಂತೆ ಸಮಾನವಾಗಿ ಕಾಣಬೇಕು

ಹಿರಿಯೂರು :
        ಸಮಾಜದಲ್ಲಿ ವಿಕಲಚೇತನ ಮಕ್ಕಳಿಗೂ ಎಲ್ಲಾ ಮಕ್ಕಳಹಾಗೆ ಬದುಕುವಹಕ್ಕು ಇದ್ದು. ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಈ ಮಕ್ಕಳಲ್ಲಿ ಆತ್ಮವಿಶ್ವಾಸ ಧೈರ್ಯ ತುಂಬಿ ಪ್ರೋತ್ಸಾಹಿಸುವ ಮೂಲಕ ಸಮಾಜದಲ್ಲಿ ಎಲ್ಲರಹಾಗೆ ಬದುಕುವ ಅವಕಾಶ ಕಲ್ಪಿಸಬೇಕು ಎಂಬುದಾಗಿ ಸಾರ್ವಜನಿಕ ಶಿಕ್ಷಣಇಲಾಖೆ ಉಪನಿರ್ಧೇಶಕರಾದ ಎ.ಜೆ.ಅಂತೋನಿ ಹೇಳಿದರು.
        ನಗರದ ನೆಹರು ಕ್ರೀಡಾಂಗಣದಲ್ಲಿರುವ ಉರ್ದುಪ್ರೌಢಶಾಲೆ ಆವರಣದಲ್ಲಿ ಸಮಗ್ರಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಸಾರ್ವಜನಿಕ ಶಿಕ್ಷಣಇಲಾಖೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಸ್ಕಂದಸಂಸ್ಥೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
        ಸಾರ್ವಜನಿಕ ಶಿಕ್ಷಣಇಲಾಖೆ ನೇತೃತ್ವದಲ್ಲಿ ಈ ತಾಲ್ಲೂಕಿನಲ್ಲಿ ಸುಮಾರು 553 ವಿವಿಧರೀತಿಯ ವಿಕಲಚೇತನ ಮಕ್ಕಳನ್ನು ಗುರುತಿಸಲಾಗಿದ್ದು, ಅವರುಗಳಿಗೆ ತಪಾಸಣೆ ನಡೆಸಿ ನೂನ್ಯತೆಗಳಿಗೆ ಅನುಗುಣವಾಗಿ ಅಗತ್ಯ ಸಲಕರಣೆ ಸೌಲಭ್ಯಗಳನ್ನು ನೀಡಲಾಗುವುದು ಎಂದರಲ್ಲದೆ ಈ ತಾಲ್ಲೂಕಿನಲ್ಲಿ 17 ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ಹಾಗೂ 9 ಜನ ಮಕ್ಕಳಿಗೆ ಬೆಂಗಾವಲು ಶಿಕ್ಷಣ ನೀಡಲಾಗುತ್ತಿದ್ದು, ಇಂತಹ ಮಕ್ಕಳನ್ನು ಪೋಷಕರು ವಿಶೇಷ ಕಾಳಜಿಯಿಂದ ನೋಡಿಕೊಳ್ಳುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
         ಜಿಲ್ಲಾಶಿಕ್ಷಣ ಸಹಾಯಕ ಯೋಜನಾಧಿಕಾರಿ ಎ.ಕೆ.ಕೆಂಗಪ್ಪ ಮಾತನಾಡಿ, ಯಾವುದೇ ಒಂದು ಮಗು ಹುಟ್ಟಿನಿಂದ ಅಥವಾ ಬೆಳೆಯುತ್ತಾ ಬೇರೆಬೇರೆ ಕಾರಣಗಳಿಗೆ ಅಂಗವಿಕಲತೆ ಹೊಂದಬಹುದು ಆದರೆ ಅಂಗವಿಕಲತೆ ಒಂದು ಶಾಪವಲ್ಲ ಈ ಮಕ್ಕಳಿಗೆ ಉತ್ತಮ ಪ್ರೋತ್ಸಾಹ ನೀಡಿದರೆ ರಾಜ್ಯ-ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಒಲಂಪಿಕ್ಸ್‍ನಲ್ಲೂ ಸಹ ಉತ್ತಮ ಸಾಧನೆ ಮಾಡಿ ಈ ದೇಶಕ್ಕೆ ಕೀರ್ತಿ ತಂದ ಉದಾಹರಣೆಗಳಿವೆ ಎಂದರು.
       ಕ್ಷೇತ್ರಶಿಕ್ಷಣಾಧಿಕಾರಿ ಸಿ.ವೈ.ನಟರಾಜ್ ಮಾತನಾಡಿ, ನಾವು ವಿಕಲಚೇತನ ಮಕ್ಕಳಿಗೆ ಅನುಕಂಪ ತೋರಿಸುವುದು ಬೇಡ ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಬೇಕಿದೆ.ಆಗ ಮಾತ್ರ ಅವರೂ ಸಹ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
         
        ಕಾರ್ಯಕ್ರಮದಲ್ಲಿ ಕ್ಷೇತ್ರಸಮನ್ವಯ ಅಧಿಕಾರಿ ರಾಘವೇಂದ್ರ, ಅಕ್ಷರದಾಸೋಹ ಅಧಿಕಾರಿ ನಾಗರಾಜಚಾರಿ, ಸರ್ಕಾರಿನೌಕರಸಂಘದ ಗೌ||ಅಧ್ಯಕ್ಷ ಗೋಪಾಲ್, ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ದೇವರಾಜ್, ಜಿಲ್ಲಾ ಶಿಕ್ಷಕರಸಂಘದ ಅಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ಮಹಂತೇಶ್, ತಾ||ಶಿಕ್ಷಕರಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಕಾರ್ಯದರ್ಶಿ ಮಂಜುನಾಥ್,   ಕ್ಷೇತ್ರಸಮನ್ವಯ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಬಸವರಾಜ್, ಮಲ್ಲೇಶ್, ತಿಪ್ಪೇಶ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರಂಭದಲ್ಲಿ ಬಿಆರ್‍ಪಿ  ಶ್ರೀನಿವಾಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಮುಖ್ಯಶಿಕ್ಷಕ ಗೋನಾಳ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap