ಭಯೋತ್ಪಾದನೆ ನಿಗ್ರಹದಿಂದ ಆರ್ಥಿಕ ಸಂಕಷ್ಟ: ಇಮ್ರಾನ್ ಖಾನ್

ಇಸ್ಲಾಮಾಬಾದ್: 
          ಪಾಕಿಸ್ತಾನ ತನ್ನ  ಅತೀಬುದ್ದಿಯಿಂದ ಮತ್ತೊಮ್ಮೆ ಜಗತ್ತಿನ ಮುಂದೆ ಮತ್ತೆ ಉದ್ದಟತನ ತೋರುವ ಮೂಲಕ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದರೆ ಪಾಕಿಸ್ತಾನದ ಅಸಹಕಾರದಿಂದ ಪ್ರಯತ್ನ ಪರಿಣಾಮಕಾರಿಯಾಗಿಲ್ಲ , ಮತ್ತು ಈ ಆರೋಪದಿಂದ ಮುಕ್ತವಾಗಲು ಪಾಕಿಸ್ತಾನ ತನ್ನ ಆರ್ಥಿಕ ಸ್ನೇಹಿತ ಹಾಗು ವಿಶ್ವದ ದೊಡ್ಡಣ್ಣ ಭಯೋತ್ಪಾದನೆ ವಿಷಯದಲ್ಲಿ ನಮಗೆ ಯಾವುದೇ ಸಹಕಾರವನ್ನೂ ನೀಡಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. 
         ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ವೈಫಲ್ಯಕ್ಕೆ ಪಾಕಿಸ್ತಾನವನ್ನು ಬಲಿಪಶು ಮಾಡುವುದು ಸರಿಯಲ್ಲ ೆಣದು ಗುಡುಗಿದ ಅವರು  ತಾಲಿಬಾನ್ ಹಿಂದೆಂದಿಗಿಂತಲೂ ಏಕೆ ಬಲಿಷ್ಠವಾಗಿದೆ ಎಂಬುದನ್ನು ಅಮೆರಿಕ ಅರಿಯಬೇಕಾಗಿದೆ ಎಂದು ಕಿವಿಮಾತು ಹೇಳುವ ಮೂಲಕ ಅಮೇರಕದ ಕಿವಿ ಹಿಂಡಿದ್ದಾರೆ . 
          ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುತ್ತಿದ್ದ ಆರ್ಥಿಕ ನೆರವಿಗೆ ಕಡಿವಾಣ ಹಾಕಿರುವ ಕ್ರಮವನ್ನು ಸಮರ್ಥನೆ ಮಾಡಿಕೊಂಡು ಟ್ರಂಪ್ ಟ್ವೀಟ್ ಮಾಡಿದ ಬೆನ್ನಲ್ಲೆ ಇಮ್ರಾನ್ ಖಾನ್ ಸಹ ಟ್ವೀಟ್ ಮಾಡಿದ್ದು, ಪಾಕ್ ವಿರುದ್ಧ ಟ್ರಂಪ್ ಆರೋಪಗಳಿಗೆ ನೇರವಾಗಿ ದಾಖಲೆಗಳನ್ನು ನೀಡಬೇಕು ಎಂದಿದ್ದಾರೆ.  9/11 ದಾಳಿಯಲ್ಲಿ ಯಾವುದೇ ಪಾಕಿಸ್ತಾನಿಯೂ ಇಲ್ಲದೇ ಇದ್ದರೂ ಸಹ ಅಮೆರಿಕ ಭಯೋತ್ಪಾದನೆ ವಿರುದ್ಧ ನಡೆಸಿದ್ದ ಹೋರಾಟದಲ್ಲಿ ಪಾಕ್ ಸಹ ಕೈ ಜೋಡಿಸಲು ನಿರ್ಧರಿಸಿತ್ತು. ಈ ಹಂತದಲ್ಲಿ ಪಾಕಿಸ್ತಾನ ಸಹ 75,000 ಸಾವು-ನೋವುಗಳನ್ನು ಕಂಡಿದ್ದು, 123 ಬಿಲಿಯನ್ ಡಾಲರ್ ನಷ್ಟು ಹಣವನ್ನೂ ಕಳೆದುಕೊಂಡಿದೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ           

Recent Articles

spot_img

Related Stories

Share via
Copy link