ಬೆಂಗಳೂರು
ಟೀ ಕುಡಿಯುತ್ತಾ ನಿಂತಿದ್ದ ಜೆಡಿಎಸ್‍ನ ಪರಿಶಿಷ್ಟ ಜಾತಿ ವರ್ಗಗಳ(ಎಸ್ಸಿ/ಎಸ್ಟಿ) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ ದುಷ್ಕರ್ಮಿಗಳಲ್ಲಿ ಇಬ್ಬರಿಗೆ ಕನಕಪುರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗಿರುವ ಪ್ರಮುಖ ಆರೋಪಿ ಕೌಶಿಕ್‍ಗಾಗಿ ತೀವ್ರ ಶೋಧ ನಡೆಲಾಗಿದ್ದು ಕೃತ್ಯದಲ್ಲಿ ನಾಲ್ವರು ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ರಾಮನಗರ ಎಸ್‍ಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡು ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಲೆ ಆರೋಪಿಗಳಾದ ಕನಕಪುರದ ರಾಮು (21) ಹಾಗೂ ದೀಪು (27) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಇವರಿಬ್ಬರೂ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ
ವಾರದ ಹಿಂದೆ ಕೊಲೆ
ಕಳೆದ ನ.12ರಂದು ರಾಜಗೋಪಾಲ್ ಕನಕಪುರದ ರಾಮನಗರ ರಸ್ತೆಯಲ್ಲಿನ ಜನನಿ ಆಸ್ಪತ್ರೆ ಬಳಿ ಬಳಿ ಸಂಜೆ ಟೀ ಕುಡಿಯುತ್ತಿದ್ದ ವೇಳೆ ಬಂದ ಬಂಧಿತ ರಾಮು ದೀಪು ಸೇರಿ ನಾಲ್ವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗಾಗಿ ಕನಕಪುರ ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ತಂಡಗಳು ತನಿಖೆ ಕೈಗೊಂಡಾಗ ರಾಮನಗರದ ಪಿ.ರಾಂಪುರದ ಮೂಲದ ರಾಜಗೋಪಾಲ್ ಕನಕಪುರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡಿಕೊಂಡು ನೆಲೆಸಿದ್ದು ಹಲವು ಸ್ನೇಹಿತರನ್ನು ಹೊಂದಿದ್ದರು ಕೆಲವರ ದ್ವೇಷ ಕಟ್ಟಿಕೊಂಡಿರುವುದು ಪತ್ತೆಯಾಯಿತು.
ಜನನಿ ಆಸ್ಪತ್ರೆಯ ಬಳಿ ರಾಜ್‍ಗೋಪಾಲ್ ಅವರು ಟೀ ಕುಡಿಯಲು ಬರುವ ಮುನ್ನ ಕೆಲವರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಸ್ಥಳಿಯರು ಗಲಾಟೆ ಬಿಡಿಸಿ ಎಲ್ಲರನ್ನೂ ಸಮಾಧಾನ ಪಡಿಸಿ ಕಳುಹಿಸಿರುವುದು ಕಂಡುಬಂದು ಅದೇ ಕಾರಣಕ್ಕೆ ಕೊಲೆಯಾಗಿರುವ ಸುಳಿವು ಪತ್ತೆಯಾಗಿ ಆರೋಪಿಗಳ ಚಲನವಲನ ಹತ್ತಿರದ ಅಂಗಡಿಯೊಂದರ ಬಳಿ ಅಳವಡಿಸಲಾಗಿದ್ದ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿತ್ತು.
ಪೈಪ್‍ಲೇನ್ ಹೌಸ್‍ನಲ್ಲಿ ಪತ್ತೆ
ಅದನ್ನು ಪರಿಶೀಲನೆ ನಡೆಸಿ ಕಾರ್ಯಾಚರಣೆ ನಡೆಸಿದ ಕನಕಪುರ ಸರ್ಕಲ್‍ಇನ್ಸ್‍ಪೆಕ್ಟರ್ ಮಲ್ಲೇಶ್ ಮತ್ತವರ ತಂಡ ಆರೋಪಿಗಳು ಸಾತನೂರಿನ ಅಚ್ಚಲು ಉಪ್ಪಕೆರೆದೊಡ್ಡಿಯ ಪೈಪ್‍ಲೇನ್‍ಹೌಸ್ ಬಳಿ ಇರುವ ಮಾಹಿತಿ ಪತ್ತೆಹಚ್ಚಿ ಮಂಗಳವಾರ ಮುಂಜಾನೆ ಸ್ಥಳಕ್ಕೆ ಧಾವಿಸಿ ನಾಕಬಂಧಿ ಮಾಡಿ ಬಂಧಿಸಲು ಹೋದಾಗ ರಾಮು, ದೀಪು ಹಾಗೂ ಕೌಶಿಕ್ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರನಾಗುವಂತೆ ಸೂಚಿಸಿದರೂ ಪೊಲೀಸರ ಮೇಲೆ ಹಲ್ಲೆ ಮಾಡಲು ಬರುತ್ತಿದ್ದ ರಾಮು ಹಾಗೂ ದೀಪು ಮೇಲೆ ಸರ್ಕಲ್‍ಇನ್ಸ್‍ಪೆಕ್ಟರ್ ಮಲ್ಲೇಶ್ ಹಾಗೂ ಸಬ್‍ಇನ್ಸ್‍ಪೆಕ್ಟರ್ ಅನಂತ್‍ಕುಮಾರ್ ತಲಾ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ರಾಮನ ಬಲಗಾಲು, ದೀಪಕ್‍ನ ಎಡಗಾಲಿಗೆ ಗುಂಡೇಟು ತಗುಲಿ ಇಬ್ಬರು ಸ್ಥಳದಲ್ಲಿ ಕುಸಿದು ಬಿದ್ದಿದ್ದು ಗಾಯಾಳುಗಳನ್ನು ಕನಕಪುರ ತಾಲೂಕಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇಬ್ಬರ ಜೊತೆಯಲ್ಲಿದ್ದ ಕೌಶಿಕ್ ಪರಾರಿಯಾಗಿದ್ದು ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ.ಕೌಶಿಕ್ ಗುಂಡೇಟು ತಗುಲಿನ ದೀಪು ಸಹೋದರನಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ