ಹರಿಹರ:
ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಮಲಮೂತ್ರ ವಿಸರ್ಜನೆ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿದು ಗೊಬ್ಬು ವಾಸನೆ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದರು ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.
ಇಲ್ಲಿನ ಗುರುಭವನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ನಗರಸಭೆ ಮಳಿಗೆಗಳ ಮುಂಭಾಗದಲ್ಲಿ ಕೆಎಸ್‍ಆರ್ಟಿಸಿ ಬಸ್ ನಿಲ್ದಾಣದಿಂದ ಹರಿದು ಬರುವ ಮೂಲ ಮೂತ್ರ ವಿಸರ್ಜನೆಯ ಡ್ರೈನೆಜ್ ಪೈಪ್ ಹೊಡೆದು ಹೋಗಿ ಎರಡು ದಿನಗಳಾಗಿದ್ದು ತ್ಯಾಜ್ಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ ಬೇರೆ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಮೂಗು ಮಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದರು ಇದಕ್ಕೆ ಸಂಬಂಧಪಟ್ಟ ಆರೋಗ್ಯ ನಿರೀಕ್ಷಕರಿಗೆ ಹೇಳಿದರು ಸಬೂಬು ಹೇಳಿ ಸಾಗು ಹಾಕುತ್ತಿದ್ದಾರೆ. ಸಾರ್ವಜನಿಕರು ಆರೋಪಿಸಿದರು.
ಈ ಭಾಗದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸುಮಾರು ನೂರಾರು ಬಸ್‍ಗಳು ಬಂದು ಹೊಗುತ್ತಿದ್ದು ಸಾರ್ವಜನಿಕರ ವಾಹನಗಳು ಸಂಚರಿಸಿದಾಗ ಮಲಮೂತ್ರ ವಿಸರ್ಜನೆಯ ತ್ಯಾಜ್ಯ ನೀರು ಚಿಮ್ಮುತ್ತವೆ ಎಂದರು.
ಡ್ರೈನೆಜ್ ಪೈಪ್ ಹೊಡೆದಿರುವ ಜಾಗದಲ್ಲಿ ನಗರಸಭೆ ಮಳಿಗೆಗಳು ತಿಂಡಿ ಹೋಟೆಲ್ ,ಹಣ್ಣಿನ ಅಂಗಡಿಗಳಿದ್ದು ವ್ಯಾಪರಸ್ಥರು ವ್ಯಾಪರ ವಹಿವಾಟು ಮಾಡಲು ಈ ಗೊಬ್ಬು ವಾಸನೆಯಿಂದ ರೋಸಿ ಹೋಗಿದ್ದಾರೆ. ನಾಗರೀಕರು ಸಾಂಕ್ರಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.
ಈ ಕೂಡಲೇ ನಗರಸಭೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಡೆದು ಹೋಗಿರುವ ಡ್ರೈನೆಜ್ ಪೈಪ್ ಅನ್ನು ದುರಸ್ಥಿಪಡಿಸಿ ತ್ಯಾಜ್ಯ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ವ್ಯಾಪರಸ್ಥರು ಸಾರ್ವಜನಿಕರು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







