ಕಾರು ಚಾಲಕ ಭೀಕರ ಕೊಲೆ

ಬೆಂಗಳೂರು

        ಚೀಟಿ ಹಣ ಕಟ್ಟಲು ಪತ್ನಿಯ ಊರಿಗೆ ಹೋಗಿದ್ದ ಕಾರು ಚಾಲಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ನಗರದ ಹೊರವಲಯದ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

      ಕೊಲೆಯಾದವರನ್ನು ದೇವನಹಳ್ಳಿಯ ಬುದಲೂರಿನ ಕಾರು ಚಾಲಕ ಹರೀಶ್ (23) ಎಂದು ಗುರುತಿಸಲಾಗಿದ್ದು ಇದು ಮರ್ಯಾದಾ ಹತ್ಯೆ ಎನ್ನುವ ಶಂಕೆ ವ್ಯಕ್ತವಾಗಿದೆ.

        8 ತಿಂಗಳ ಹಿಂದೆ ನಲ್ಲೂರಿನ ಮೀನಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ ಹರೀಶ್ ಬುದಲೂರಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ. ನಲ್ಲೂರಿನಲ್ಲಿ ಚೀಟಿ ಹಾಕಿದ್ದ ಹರೀಶ್ ಪ್ರತಿ ತಿಂಗಳು ಚೀಟಿ ಹಣ ಕಟ್ಟಲು ಬಂದುಹೋಗುತ್ತಿದ್ದ. ಮಂಗಳವಾರ ಕೂಡ ಚೀಟಿ ಹಣ ಕಟ್ಟಿ ಹೊರಟಿದ್ದ ಹರೀಶ್‍ನನ್ನು ದುಷ್ಕರ್ಮಿಗಳು ಕೊಲೆ ಮಾಡಿ ನಲ್ಲೂರಿನ ಸೊಸೈಟಿ ಪಕ್ಕದಲ್ಲಿರುವ ಗುಲಾಬಿ ತೋಟದಲ್ಲಿ ಮೃತದೇಹವನ್ನು ಎಸೆದುಹೋಗಿದ್ದಾರೆ.

       ಬುಧವಾರ ಬೆಳಿಗ್ಗೆ ತೋಟಕ್ಕೆ ಹೋದ ಮಾಲೀಕರು ಮೃತದೇಹವನ್ನು ನೋಡಿ, ಕೂಡಲೇ ಚನ್ನರಾಯಪಟ್ಟಣ ಪೆಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಪೆಲೀಸರು ಪರಿಶೀಲನೆ ನಡೆಸಿದ್ದಾರೆ.

        ಹರೀಶ್, ಮೀನಾಳನ್ನು ಪ್ರೀತಿಸಿ ವಿವಾಹವಾಗಿದ್ದು, ಆಕೆಯ ಕುಟುಂಬದವರಿಗೆ ಜಾತಿಯ ಕಾರಣಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಅವರೇ ಕೊಲೆ ಮಾಡಿ, ಮರ್ಯಾದಾ ಹತ್ಯೆ ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿರುವ ಪೆÇಲೀಸರು, ಕೊಲೆಗಾರರಿಗಾಗಿ ಬಲೆಬೀಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link