ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳ ದುರಂತ ಸಾವು

ಬೆಳಗಾವಿ: 

      ಬೆಳಗಾವಿ ಹೊರವಲಯದ ಸಾವಗಾವ ಗ್ರಾಮದ ಕೆರೆಯಲ್ಲಿ ಈಜಲು ಹೋದ ಸುಮಾರು 14 ರಿಂದ 16 ವರ್ಷದ ಶಾಲಾ ಮಕ್ಕಳು ನೀರುಪಾಲಾದ ದುರ್ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

      ಈದ್ ಮಿಲಾದ್ ಪ್ರಯುಕ್ತ ಇಂದು ಶಾಲೆಗೆ ರಜೆ ಇದ್ದ ಕಾರಣ ಕೆರೆಗೆ ಈಜಲು ಹೋಗಿದ್ದ ಮಕ್ಕಳು ಕೆರೆಯಲ್ಲಿನ ಕೆಸರಿನಲ್ಲಿ ಸಿಕ್ಕು ನೀರುಪಾಲಾಗಿದ್ದಾರೆ. ಕರೆಯ ದಡದಲ್ಲಿ ಇದ್ದ ಬಟ್ಟೆಬರೆಗಳನ್ನು ಗುರುತಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದಾಗ ದುರ್ಘಟನೆ ಸಂಭವಿಸಿದ ಬಗ್ಗೆ ತಿಳಿದುಬಂದಿದೆ.

      ಸಾವಿಗೀಡಾದ ಮಕ್ಕಳು ಬೆಳಗಾವಿ ಹೊರವಲಯದ ಗುಡ್‍ಶೆಡ್ ಪ್ರದೇಶದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು. ಚೈತನ್ಯ ಬಾಂದುರಗೆ, ಅಮರಸಿಂಗ್, ಗೌತಮ ಕಲಘಟಗಿ ಹಾಗೂ ಸಾಯಿಲ್ ಬೆನಕೆ ಸಾವಿಗೀಡಾದ ಮಕ್ಕಳಾಗಿದ್ದು, ಗಣೇಶಪೂರ, ಹಿಂಡಲಗಾ ಹಾಗೂ ಬೆಳಗಾವಿಯ ಭಾಗ್ಯನಗರದ ನಿವಾಸಿಗಳೆಂದು ಗುರುತಿಸಲಾಗಿದೆ.

      ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ರಾಜಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೆಟ್ಟಿ ನೀಡಿದ್ದಾರೆ. ಶವಗಳನ್ನು ನೀರಿನಿಂದ ಹೊರತೆಗೆದು ಪೋಸ್ಟ್‍ಮಾರ್ಟ್ ನಂತರ ಸಂಬಂಧಿಸಿದ ಪಾಲಕರಿಗೆ ಹಸ್ತಾಂತಿರಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link