ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ತೇವೆಡೆಹಳ್ಳಿ ಬಸವರಾಜು ಆರೋಪಿಸಿದ್ದಾರೆ. ಮಕ್ಕಳು ವೃದ್ದರು ರಸ್ತೆಯಲ್ಲಿ ಸಂಚರಿಸದಂತಾಗಿದೆ . ಅಲ್ಲದೆ ದ್ವಿಚಕ್ರವಾಹನ ಸವಾರರನ್ನು ಸಾಕಷ್ವು ಭಾರಿ ಬೀಳಿಸಿರುವ ಘಟನೆಗಳು ಕೂಡ ಜರುಗಿದೆ . ರಾತ್ರಿ ವೇಳೆ ಬೈಕ್ ಸವಾರರಿಗೆ ಸಾಕಷ್ವು ತೊಂದರೆಯಾಗುತ್ತಿದೆ. ನಾಯಿಗಳು ಸವಾರರನ್ನು ಓಡಿಸಿಕೊಂಡು ಹೋಗುತ್ತವೆ . ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಎದ್ದು ಹೋಗಿರುವ ಘಟನೆಗಳು ಕೂಡ ನಡೆಯತ್ತಲೆ ಇವೆ. ಈಗಿದ್ದರೂ ಸಹ ಬೀದಿ
ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಾದ ಪಟ್ಟಣ್ಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯವರು ಮೌನವರಿಸಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಹೊಸಕೆರೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಶಾಲಾ ಮಕ್ಕಳು , ವೃದ್ಧರು , ವಾಹನ ಸವಾರರು ಸಂಚರಿಸಬೇಕಾದರೆ ಜೀªವನ್ನು ಕೈಯಲ್ಲಿ ಇಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.ಪಟ್ಟಣ್ಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯವರು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
