ಸಂಬಳಕ್ಕೆ ಆಗ್ರಹಿಸಿ ಪುರಸಭಾ ಟ್ರ್ಯಾಕ್ಟರ್ ಚಾಲಕರಿಂದ ಪ್ರತಿಭಟನೆ

ಕುಣಿಗಲ್ :

      ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 15 ವರ್ಷಗಳಿಂದ ಟ್ರ್ಯಾಕ್ಟರ್ ಚಾಲಕರಾಗಿ ಕೂಲಿ ಮಾಡುತ್ತಿರುವ ಪುರಸಭಾ ಸಿಬ್ಬಂದಿ ಕಳೆದ 4 ತಿಂಗಳಿಂದ ಸಂಬಳ ನೀಡದಿರುವುದನ್ನು ಖಂಡಿಸಿ ಕಸತುಂಬಿದ ಟ್ರ್ಯಾಕ್ಟರ್‍ಗಳನ್ನು ಪುರಸಭಾ ಕಚೇರಿಯ ಮುಂದೆಯೇ ನಿಲ್ಲಿಸಿ ಪ್ರತಿಭಟಿಸಿದರು.

        ಪುರಸಭೆಯಲ್ಲಿ ಇವರು 6 ಟ್ರ್ಯಾಕ್ಟರ್ 2 ಟಿಪ್ಪರ್ ಆಟೋಗಳಿಗೆ ಚಾಲಕರಾಗಿ ಸೇವೆ ಮಾಡುತ್ತಿರುವ 6 ಜನ ಚಾಲಕರಿಗೆ ಕಳೆದ ಜುಲೈ ತಿಂಗಳಿಂದ ಅಕ್ಟೋಬರ್‍ವರೆಗಿನ 4 ತಿಂಗಳ ಸಂಬಳ ನೀಡಿಲ್ಲ. ಇದನ್ನು ಕೇಳಿದರೆ ಪುರಸಭೆಯ ಪರಿಸರ ಅಧಿಕಾರಿ ಕೊಡಲು ಬರುವುದಿಲ್ಲಾ ಎಂದು ಕಾನೂನು ರೀತಿ ನೀತಿ ಮಾತನಾಡುತ್ತಿದ್ದಾರೆ.

        ಆದರೆ ನಾವು ಟ್ರ್ಯಾಕ್ಟರ್ ಚಾಲಕರಾಗಿ ಕೆಲ ಮಾಡುತ್ತಿದ್ದರಿಂದಲೇ ಪಟ್ಟಣದ ಕಸ ವಿಲೆವಾರಿಯಾಗುತ್ತಿತ್ತು ಎಂಬುದನ್ನ ಮನಗಾಣಲಿ. ಇದೀಗ ಹೊಸದಾಗಿ ಬಂದಿರುವ ಸಿ.ಒ. ಮತ್ತು ಅಧಿಕಾರಿಗಳು ಮೇಲ್ಮಟ್ಟದಲ್ಲಿ ಅಥವಾ ಪುರಸಭಾ ಅಧ್ಯಕ್ಷರ, ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನ ಮಾಡಿ ಸಂಬಳ ನೀಡಬಹುದಲ್ಲಾ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಕೂಲಿ ನಂಬಿಕೊಂಡು ಸಂಸಾರ ಸಾಕಲು ಅಂಗಡಿಗಳಲ್ಲಿ ಸಾಲ ತಂದು ಜೀವನ ಮಾಡುತ್ತಿದ್ದೇವೆ.

         ಅಂಗಡಿಯವರಿಗೆ ಇದೀಗ ಸಂಬಳದ ಹಣ ಕೊಟ್ಟರೆ ಸಾಲಾ ತೀರಿಸಿ ಮಕ್ಕಳ ಶಾಲಾ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬಹುದು, ಇಲ್ಲವಾದರೆ ನಾವು ವಿಷ ಕುಡಿಯಬೇಕು ಎಂದು ಚಾಲಕ ಕೃಷ್ಣಮೂರ್ತಿ, ಯಜರಾಂ ಹಾಗೂ ನಾಗರಾಜ್ ತಮ್ಮ ನೋವನ್ನ ಹೇಳಿಕೊಳ್ಳುವ ಮೂಲಕ ನಮಗೆ ಸಂಬಳ ನೀಡುವವರೆಗೂ ಕೆಲಸಕ್ಕೆ ಹೋಗದೆ ಪ್ರತಿಭಟಿಸುತ್ತೇವೆ ಎಂದು ಧಿಕ್ಕಾರ ಕೂಗಿದ ಅವರು, ಪಟ್ಟಣದ ಕೆಲವು ಕಡೆಯಿಂದ ಟ್ರ್ಯಾಕ್ಟರ್‍ಗಳಲ್ಲಿ ತುಂಬಿದ್ದ ಎಲ್ಲಾ ವಾಹನಗಳನ್ನ ಪುರಸಭೆಯ ಬಾಗಿಲಿಗೆ ತಂದು ಅವುಗಳ ಮುಂದೆ ಕೂತು ಪ್ರತಿಭಟಿಸಿ ಪುರಸಭೆಗೆ ಎಚ್ಚರಿಕೆ ನೀಡಿ ನಮ್ಮ ಬಾಕಿ ಸಂಬಳದ ಹಣವನ್ನು ನೀಡುವವರೆಗೂ ಕೆಲಸಕ್ಕೆ ಮುಂದಾಗುವುದಿಲ್ಲಾ ಎಂದು ಆಗ್ರಹಿಸಿ ಶ್ಯಾಮಿಯಾನ ಹಾಕಿ ಗಾಂಧಿಜಿ ಅವರ ಫೋಟೋ ಇಟ್ಟು ಪ್ರತಿಭಟಿಸಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳು ಚಾಲಕರನ್ನು ಮನಸೆಳೆದು ಭರವಸೆ ನೀಡಿದ ನಂತರ, ಚಾಲಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಮುಂದಾದರು.ಪ್ರತಿಭಟನೆಯ ನೇತೃತ್ವವನ್ನು ನಾಗರಾಜು, ಲೋಕೇಶ್, ನಾರಾಯಣ್, ಜಯರಾಮ್, ಕಲ್ಲೇಶ್, ಮಂಜುನಾಥ ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link