ಮಧುಗಿರಿ :
ಕೊಳವೆ ಬಾವಿ ಇದ್ದರೂ ಸಹ ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ ಎಂದು ಶನಿವಾರ ಖಾಲಿ ಕೊಡಗಳೊಂದಿಗೆ ಬೀದಿಗಿಳಿದು ಗ್ರಾಮಸ್ಥರು ಪ್ರತಿಭಟಿಸಿದರು.
ಘಟನೆ ತಾಲೂಕಿನ ಕಸಬಾ ಹೋಬಳಿಯ ಮರುವೇಕೆರೆ ಪಂಚಾಯಿತಿ ವ್ಯಾಪ್ತಿಯ ಕರೆಕಲ್ಲು ಗ್ರಾಮದ ಹೊಸ ಕಾಲೋನಿಯ ಇಡೀ ಗ್ರಾಮದಲ್ಲಿ ನೀರಿನ ಹಾಹಾಕಾರ ಹೀಗೆ ಮುಂದುವರಿದಿದೆ. ಗ್ರಾಮಸ್ಥರೇ ನೀರಿಗಾಗಿ ಜಗಳ ಮಾಡಿಕೊಳ್ಳುವ ಮತ್ತು ನೀರಿಗಾಗಿಯೇ ಗ್ರಾಮದ ಸ್ವಚ್ಚ ಮತ್ತು ಸಹೋದರತ್ವ ಭಾವವು ಮುರಿದು ಪ್ರತಿಯೊಬ್ಬರಲ್ಲು ಕೂಡ ವೈರತ್ವ ಭಾವ ಬೆಳೆಯುವಂತಹ ವಾತವರಣ ಸೃಷ್ಟಿಯಾಗುತ್ತದೆ ಆದರೆ ಕೆಲವು ಪ್ರಭಾವಿ ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ನೀರಿನಲ್ಲೂ ರಾಜಕೀಯ ಹಸ್ತಾಕ್ಷೇಪ ಮಾಡುತ್ತಿದ್ದಾರೆಂದು ಊರಿನ ಕೆಲ ವಿದ್ಯಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೂಡಲೇ ನೀರಿನ ಸಮಸ್ಯೆ ಬಗೆಹರಿಸಿದ್ದಿರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯಿತಿಯ ಪಿಡಿಓ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ನಮ್ಮ ಸಮಸ್ಯೆಯನ್ನು ಆಲಿಸುತ್ತಿಲ್ಲ ಇವರಿಗೆ ದುರಸ್ಥಿತಿಯ ಅಧಿಕಾರವಿದ್ದರೂ ಸಹ ಕಾಲೋನಿಗೆ ನೀರು ನೀಡದೆ ನಮ್ಮ ದೈನಂದಿನ ಕೆಲಸಗಳಿಗೆ ಪರಿದಾಡುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಜನಪ್ರತಿನಿಧಿ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇಲ್ಲಿನ ಎರಡು ಬೋರ್‍ವೆಲ್‍ಗಳಲ್ಲಿ ಒಂದು ದುರಸ್ಥಿಯ ಹಂತ ತಲುಪಿದ್ದು ಮತ್ತೊಂದರಲ್ಲಿ ನೀರಿದ್ದರೂ ಸರಿಯಾದ ನಿರ್ವಹಣೆ ಇಲ್ಲವಾಗಿದ್ದು ನಿತ್ಯವೂ ನೀರು ಬಾರದೇ ಇರುವುದರಿಂದ ಗ್ರಾಮಸ್ಥರು ಸಂಕಟ ಎದುರಿಸುವಂತಾಗಿದೆ.
ಗ್ರಾಮಸ್ಥರಾದ ಲಕ್ಷ್ಮಮ್ಮ, ಪ್ರೇಮ, ಹನುಮಂತಪ್ಪ, ಲಕ್ಷ್ಮಮ್ಮ, ಕಿರಣ್, ರಂಗಮ್ಮ, ಭಾರತಿ, ರಂಗಲಕ್ಷ್ಮಮ್ಮ ಪಾಂಡುರಂಗ, ರಂಗನಾಥ, ಗಂಗಾಧರ, ನಾಗರಾಜು, ಸಿದ್ದಣ್ಣ, ಇತರರು ಪ್ರತಿಭಟನೆಯಲ್ಲಿ ಇದ್ದರು.
