ನವದೆಹಲಿ:
ದೇಶದಲ್ಲಿ ಶ್ರೀಮಂತ ಉದ್ಯಮಿಗಳು ತಾವು ಸಂಪಾದಿಸಿದ ಕಪ್ಪು ಹಣವನ್ನು ವಿದೇಶಗಳಲ್ಲರಿವ ಬ್ಯಾಂಕ್ ಗಳಲ್ಲಿ ಇಟ್ಟಿರುವ ವಿಷಯವು ಪ್ರತಿಯೊಬ್ಬರಿಗು ತಿಳಿದಿರುವ ವಿಷಯ ಆದರೆ ಆರ್ ಟೀ ಇ ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಕಪ್ಪು ಹಣದ ಪ್ರಮಾಣದ ಬಗ್ಗೆ ಮಾಹಿತಿ ನೀಡಲು ಪ್ರಧಾನಮಂತ್ರಿ ಕಾರ್ಯಾಲಯ ನಿರಾಕರಿಸಿದೆ.
15 ದಿನಗಳಲ್ಲಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಅಕ್ಟೋಬರ್ 16 ರಂದು ಆದೇಶ ನೀಡಿದ್ದರೂ ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿಲ್ಲ.ಕಪ್ಪು ಹಣ ಸಂಬಂಧ ಸಲ್ಲಿಸಲಾದ ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಕಾರ್ಯಾಲಯ, ವಿಶೇಷ ತನಿಖಾ ತಂಡವನ್ನು ಈಗಾಗಲೇ ರಚಿಸಲಾಗಿದ್ದು, ಅದು ತನಿಖೆಯನ್ನು ಮುಂದುವರೆಸಿದೆ ಎಂದಷ್ಟೇ ಹೇಳಿಕೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
