ಮನೆಗೆ ನುಗ್ಗಿದ ಬೊಲೆರೊ ಮಹಿಳೆ ಸಾವು

ಮಧುಗಿರಿ

           ಪಾವಗಡಕ್ಕೆ ಹಾದು ಹೋಗುವ ಕೆ.ಶಿ.ಪ್ ರಾಜ್ಯ ಹೆದ್ದಾರಿ ಲೋಕೋಪಯೋಗಿ ರಸ್ತೆ ನಲ್ಲೇಕಾಮನಹಳ್ಳಿ ಗ್ರಾಮದ ಬಳಿ ತಾ 04-11-2018 ರಂದು ರಾತ್ರಿ ಸಮಯ 11 ಗಂಟೆಯ ವೇಳೆಯಲ್ಲಿ ಮಧುಗಿರಿ ಕಡೆಯಿಂದ ಪಾವಗಡ ಕಡೆ ಹೊಗುತ್ತಿದ್ದ ಕಾರು ಕೆ ಎ 03 ಎನ್ 7744 ಹಿಂಬದಿಯಿಂದ ಬಾಳೆಕಾಯಿ ಹೊಡೆಯುವ ಬುಲೆರೊ ವಾಹನ ಎಪಿ 02 ಟಿ ಎಪ್ 0388 ಕಾರಿಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಕೆ.ಶಿ.ಪ್ ರಸ್ತೆ ಬದಿ ಪುಟ್‍ಫಾತ್ ಮೇಲೆ ತಡೆ ಬ್ಯಾರಿಗೇಟನ್ನು ಮೂರು ಕಂಬಗಳು ಮುರಿದು ಚರಂಡಿ ದಾಟಿ ಈ ಎರಡು ವಾಹನಗಳು ಇದೇ ಗ್ರಾಮದ ಲೇ ನರಸಿಂಹಯ್ಯನವರ ಮಗ ಜಯಸಿಂಹರವರ ಮನೆಗೆ ನುಗಿದ್ದು ಮನೆಯ ಗೋಡೆಗಳು ಕುಸಿದಿದ್ದು ಮೇಲ್ಛಾವಣಿಗೆ ಅಳವಡಿಸಿದ್ದ ಐದಾರು ಸಿಮೆಂಟಿನ ಷೀಟುಗಳು ತುಂಡಾಗಿರುತ್ತವೆ.

           ಅದೃಷ್ಠವಶಾತ್ ಜಯಸಿಂಹರವರು ಹಿಂಬದಿಯ ಮನೆಯಲ್ಲಿ ಮಲಗಿದ್ದರಿಂದ ಮನೆಯ ಮಾಲೀಕರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಮ್‍ಶಾದ್ ಹಾಗೂ ಶಾಹಿನಾಬಾನುಗೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿರುತ್ತಾಳೆ.ಉಮ ಪ್ಯಾರೂಖ್ ,ಯೂನಷ್ ರವರುಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ.ಚಾಲಕ ಜಮೀಲ್ ಗೆ ಪೆಟ್ಟಾಗಿರುತ್ತದೆ. ಅಪಘಾತಕ್ಕೀಡು ಮಾಡಿದ ಬುಲೇರೋ ಚಾಲಕ ತಲೆಮರಸಿಕೊಂಡಿರುತ್ತಾನೆ. ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ರಕ್ಷಣಾ ಸಿಬ್ಬಂದಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತದ ಬಗ್ಗೆ ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆಕೈಗೊಂಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link