ಮಂಗಳೂರು:
ಹಿಂದೂಗಳ ಆದರ್ಶ ಪುರುಷ ಶ್ರೀರಾಮನಿಗೆ ಮಂದಿರ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನನ್ನು ತೀವ್ರವಾಗಿ ಖಂಡಿಸಿರುವ ಪೇಜಾವರ ಶ್ರೀಗಳು ಮಂದಿರವನ್ನು ಫೆಬ್ರವರಿ ಒಳೆಗೆ ನಿರ್ಮಾಣ ಮಾಡುವಂತೆ ಎನ್’ಡಿಎ ಸರ್ಕಾರಕ್ಕೆ ಗಡುವು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಈ ವರೆಗೂ ರಾಮ ಮಂದಿರ ನಿರ್ಮಾಣ ಮಾಡದಿರುವುದು ನೀವು ರಾಷ್ಟ್ರಕ್ಕೆ ಮಾಡಿದ ಅವಮಾನ. ಮಂದಿರ ನಿರ್ಮಾಣಕ್ಕಾಗಿ ನಾಲ್ಕೂವರೆ ವರ್ಷಗಳಿಂದಲೂ ಕಾಯುತ್ತಿದ್ದೇವೆ. ಇನ್ನೂ ತಾಳ್ಮೆಯಿಂದಿರಲು ನಮ್ಮಿಂದ ಆಗದು ಎಂದು ಕಟುವಾಗಿ ತಿಳಿಸಿದ್ದಾರೆ.