ಬ್ಲಾಕ್‍ ಕಾಂಗ್ರೆಸ್‍ನಿಂದ ಜಾಫರ್ ಷರೀಫ್ ಹಾಗೂ ಅಂಬರೀಶ್ ನಿಧನಕ್ಕೆ ಸಂತಾಪ

ಹಿರಿಯೂರು:

       ತಾಲ್ಲೂಕು ಬ್ಲಾಕ್‍ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಡಿ.ಸುಧಾಕರ್‍ರವರ ಕಛೇರಿಯಲ್ಲಿ ದಿವಂಗತ ಮಾಜಿ ಕೇಂದ್ರ ರೈಲ್ವೆ ಸಚಿವರಾದ ಜಾಫರ್‍ಶರೀಫ್ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ದಿವಂಗತ ಅಂಬರೀಶ್‍ರವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

       ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ್‍ರವರು ಪ್ರಧಾನಮಂತ್ರಿ ಪಿ.ವಿ.ನರಸಿಂಹರಾವ್ ಸಂಪುಟದಲ್ಲಿ ಅತ್ಯಂತ ಮಹತ್ವದ ರೈಲ್ವೆಶಾಖೆಯನ್ನು ಹೊಂದಿ ದೇಶದ ಹಲವಾರು ಪ್ರದೇಶಗಳಿಗೆ ರೈಲ್ವೆಸಂಪರ್ಕವನ್ನು ಕಲ್ಪಿಸಿದ ಕೀರ್ತಿ ದಿವಂಗತ ಜಾಫರ್‍ಶರೀಫ್‍ರವರಿಗೆ ಸಲ್ಲುತ್ತದೆ. ಅದೇ ರೀತಿ ಕೇಂದ್ರ ಹಾಗೂ ರಾಜ್ಯದ ವಸತಿಖಾತೆ ಸಚಿವರಾದ ಕಳೆದ ವಿಧಾನಸಭೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಅಜಾತಶತ್ರು ಅಂಬರೀಶರವರ ಅಕಾಲಮರಣಕ್ಕೆ ಈಡಾಗಿದ್ದು ಅತ್ಯಂತ ದುಃಖಕರ ವಿಷಯವಾಗಿದೆ ಎಂದು ತಿಳಿಸಿದರು.

        ಈ ಸಂದರ್ಭದಲ್ಲಿ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿಜೆ. ರಮೇಶ್, ಎಪಿಎಂಸಿ ಅಧ್ಯಕ್ಷರಾದ ದಯಾನಂದ, ಪಿಎಲ್‍ಡಿ ಬ್ಯಾಂಕ್ ಸದಸ್ಯರಾದ ಪಿ.ಎಸ್.ಸಾದತ್‍ವುಲ್ಲಾ, ಅಜ್ಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪ್ರಕಾಶ್, ಜಿ.ದಾದಾಪೀರ್, ಎಸ್.ಸಿ.ಸೇಲ್ ಉಪಾಧ್ಯಕ್ಷರಾದ ಶಿವಕುಮಾರ್, ವಿ.ಜ್ಞಾನೇಶ್ ಕುಮಾರ್, ಯುವಕಾಂಗ್ರೆಸ್ ಅಧ್ಯಕ್ಷರಾದ ರಫೀಕ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಚಿಗಳಿಕಟ್ಟೆಕಾಂತರಾಜ್, ಮಾಜಿ ಎಪಿಎಂಸಿ ಅಧ್ಯಕ್ಷರಾದ ಈರಲಿಂಗೇಗೌಡ ಶ್ರವಣಗೆರೆ ಚಂದ್ರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಜಿಂಪಾಷ, ಅಮೀಮ್ ಸೇವಾದಳ ಅಧ್ಯಕ್ಷ ಅಶೋಕಬಾಬು, ಟಿ.ಬಿ.ಶಿವಕುಮಾರ್, ಹಿಂದುಳಿದ ವರ್ಗದ ಅಧ್ಯಕ್ಷ ತರಕಾರಿರಘು, ಎಸ್‍ಟಿಬಿಟಿ ಅಧ್ಯಕ್ಷ ಗುರು, ಟಿ.ಬಿ.ಅರುಣ್‍ಕುಮಾರ್, ಕೃಷ್ಣಮೂರ್ತಿ, ಎಸ್.ಟಿ.ಸೀಲ್, ಅಧ್ಯಕ್ಷ ಗಿರೀಶ್, ಪ್ರಕಾಶ್ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link