ಸಂಪೂರ್ಣ ಜಾರಿಯಾಗದ ಭಾರತ ಸಂವಿಧಾನ

ದಾವಣಗೆರೆ:

      ಭಾರತೀಯ ಸಂವಿಧಾನ ಇದುವರೆಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಸಂಪನ್ಮೂಲ ವ್ಯಕ್ತಿ ಎ.ಕೆ.ಚನ್ನೇಶ್ವರ ಹೊನ್ನಾಳಿ ಆರೋಪಿಸಿದರು.

     ಇಲ್ಲಿನ ಸಕ್ರ್ಯೂಟ್ ಹೌಸ್ ಸಭಾಂಗಣದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿ ರಾಷ್ಟ್ರಕ್ಕೆ ಸಮರ್ಪಿಸಿರುವ ಭಾರತ ಸಂವಿಧಾನ ಪ್ರಪಂಚದಲ್ಲೇ ಅತ್ಯುತ್ತಮ ಸಂವಿಧಾನ ಎನಿಸಿಕೊಂಡಿದ್ದರೂ, ನಮ್ಮನ್ನಾಳಿದ ಸರ್ಕಾರಗಳು ಅದನ್ನು ಸರಿಯಾಗಿ ಅನುಷ್ಠಾನಗೊಳಿಸದ ಪರಿಣಾಮ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಅಸಮಾನತೆ ತಾಂಡವವಾಡಿತ್ತಿದೆ. ಅಸ್ಪøಶ್ಯತೆ, ದಾರಿದ್ರ್ಯ ಜೀವಂತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ವಹಿಸಿದ್ದರು. ಈ ವೇಳೆ ಶಿಕ್ಷಣತಜ್ಞ ಡಾ.ಹೆಚ್.ವಿಶ್ವನಾಥ್, ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಬಸವರಾಜ್, ಸಂತೋಷ್ ಎಂ. ನೋಟದವರ್, ಕೆ.ಸಿ.ಮೂರ್ತಿ ಬೆಳ್ಳಿಗನೂಡು, ಕೃಷ್ಣಪ್ಪ ನವಿಲೇಹಾಳ್, ಎನ್. ಜಯಪ್ಪ, ಡಿ.ಡಿ. ಹನುಮಂತಪ್ಪ, ಎಸ್.ಹೆಚ್. ಶಾಂತರಾಜ್, ವಿನಾಯಕ ಹೊಳೆಸಿರಿಗೆರೆ, ಕಾರಿಗನೂರು ನಾಗರಾಜ್, ನಟರಾಜ್ ಕೋಗಲೂರು, ಕೆ.ಎಂ.ವಾಗೀಶಯ್ಯ, ಮಂಜುನಾಥ್ ಹರಿಹರ, ಗೋವಿಂದರಾಜ್ ಚನ್ನಗಿರಿ, ನ್ಯಾಮತಿ ಹಾಲೇಶ್, ಮಹಾಂತೇಶ್ ಹೊನ್ನಾಳಿ, ಬಾಬುರಾಜೇಂದ್ರ ಪ್ರಸಾದ್ ಜಗಳೂರು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link