ಕಾರ್ಯನಿರ್ವಹಣಾಧಿಕಾರಿ ವಿರುದ್ದ ಪಕ್ಷ ಬೇದ ಮರೆತು ಸದಸ್ಯರ ಆಕ್ರೋಶ

ಚಳ್ಳಕೆರೆ

       ಚಿತ್ರದುರ್ಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣೆಯ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯೆ ಪಕ್ಷ ಬೇದ ಮರೆತು ತಾಲ್ಲೂಕಿನ ಹಿತದೃಷ್ಠಿಯಿಂದ ಇಒರವರ ವರ್ಗಾವಣೆಗೆ ನಿರ್ಣಯ ಕೈಗೊಂಡ ಘಟನೆ ನಡೆಯಿತು. ಬರಗಾಲದ ಈ ನಾಡಿನಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಬೇಕಾದ ಈ ಅಧಿಕಾರಿ ಚುನಾಯಿತ ಜನಪ್ರತಿನಿಧಿಗಳನ್ನೇ ಬೆಲೆ ನೀಡುತ್ತಿಲ್ಲವೆಂದು ಎಲ್ಲಾ ಸದಸ್ಯರ ಆರೋಪವಾಗಿತ್ತು.

      ಕಳೆದ ಎರಡು ವರ್ಷಗಳಿಂದ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಎಲ್.ಈಶ್ವರಪ್ರಸಾದ್ ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಅಗೌರವ ತೋರುತ್ತಿದ್ದು, ಕೂಡಲೇ ಅವರನ್ನು ಸರ್ಕಾರ ವರ್ಗಾವಣೆ ಮಾಡಬೇಕೆಂಬ ನಿರ್ಣಯವನ್ನು ಕೈಗೊಂಡಿದ್ದಲ್ಲದೆ ಕಾರ್ಯನಿರ್ವಹಣಾಧಿಕಾರಿಗಳು ಬದಲಾವಣೆಯಾಗದೇ ಹೊರತು ತಾಲ್ಲೂಕು ಪಂಚಾಯಿತಿಯ ಯಾವುದೇ ಸಭೆಗೆ ಆಗಮಿಸುವುದಿಲ್ಲವೆಂಬ ನಿರ್ಧಾರವನ್ನು ಕೈಗೊಂಡು, ಸಭೆಯನ್ನು ಬಹಿಷ್ಕರಿಸಿದ ಘಟನೆ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

      ಪ್ರಾರಂಭದಲ್ಲಿ ಇಒ ಈಶ್ವರಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಮಾಹಿತಿ ನೀಡುವರು ಎಂದು ಪ್ರಕಟಿಸುತ್ತಲೇ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮರೆಡ್ಡಿ, ನವೀನ್, ಎಸ್.ಒ.ತಿಪ್ಪೇಸ್ವಾಮಿ, ಸುನಂದಮ್ಮ, ಕಾಲುವೇಹಳ್ಳಿ ಶ್ರೀನಿವಾಸ್, ಜಿ.ವೀರೇಶ್, ಉಮಾಜನಾರ್ಥನ್, ಸಮರ್ಥರಾಯ, ವಿಜಯಲಕ್ಷ್ಮಿ, ಎಸ್.ಒ.ತಿಪ್ಪೇಸ್ವಾಮಿ, ಮಲ್ಲಪ್ಪ, ರೇಣುಕಮ್ಮ, ತಿಪ್ಪಕ್ಕ, ತಿಮ್ಮಾರೆಡ್ಡಿ, ಸಾಕಮ್ಮ, ಶಿವಮ್ಮ, ಕರುಡಪ್ಪ, ಸುವರ್ಣಮ್ಮ, ಅಧ್ಯಕ್ಷರಾದ ಕವಿತಾರಾಮಣ್ಣ, ಉಪಾಧ್ಯಕ್ಷ ತಿಪ್ಪಮ್ಮಲಿಂಗಾರೆಡ್ಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ಸದಸ್ಯರಿಗೆ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳ ಬಗ್ಗೆ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚಿಸುತ್ತಿಲ್ಲ. ಪ್ರತಿಯೊಂದು ಹಂತದಲ್ಲೂ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ಕೆಲವು ಮಹಿಳಾ ಸದಸ್ಯರಿಗೆ ನಾನು ನನ್ನ ಅಧಿಕಾರ ವ್ಯಾಪ್ತಿಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ತೋರಿಸಿದ್ದೇನೆಂಬ ದರ್ಪದ ಮಾತು ಆಡುತ್ತಾರೆಂಬ ಆರೋಪಗಳ ಸುರಿಮಳೆಗೈದರು.

        ಈ ಹಂತದಲ್ಲಿ ಇಒ ಈಶ್ವರಪ್ರಸಾದ್ ಸಮಜಾಯಿಸಿ ನೀಡಲು ಯತ್ನಿಸಿದರಾದರೂ ಸದಸ್ಯರು ಅವಕಾಶ ನೀಡಲಿಲ್ಲ. ನಂತರ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಸಣ್ಣ ಸೂರಪ್ಪ, ರಂಜಿತಾ ಮುಂತಾದವರು ನಿರ್ಣಯ ಮಾಡುವ ಮುನ್ನ ಶಾಸಕರ ಗಮನಕ್ಕೆ ತರಬೇಕು ಹಾಗೂ ಇಒರವರಿಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡಬೇಕೆಂದರು. ಆದರೆ, ಬಹುತೇಕ ಸದಸ್ಯರು ಇಒರವರ ವಿರುದ್ದ ಇದ್ದ ಅಸಮದಾನವನ್ನು ಟೇಬಲ್ ಕುಟ್ಟುವ ಮೂಲಕ ವ್ಯಕ್ತಪಡಿಸಿದರಲ್ಲದೆ ನಮಗೆ ಇಂತಹ ಅಧಿಕಾರಿ ಬೇಡವೇ ಬೇಡ. ಬರಗಾಲದಿಂದ ಜನ ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿ ಇಲ್ಲದೆ ಒದ್ದಾಡುತ್ತಾರೆ.

         ಕೆಲವು ಕಡೆ ಕುಡಿಯಲು ನೀರಿಲ್ಲ. ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ನೀಡಿದೆ ತಮಗೆ ಇಷ್ಟಬಂದಂತೆ ಕಾಮಗಾರಿಯನ್ನು ನಡೆಸುತ್ತಿದ್ಧಾರೆ. ಒಂದು ರೀತಿ ತಾಲ್ಲೂಕು ಪಂಚಾಯಿತಿಯಲ್ಲಿ ಇಒರವರ ತೊಗಲಕ್, ಹಿಟ್ಲರ್ ದರ್ಬಾರ್ ಪ್ರಾರಂಭವಾಗಿದೆ. ಸಿಬ್ಬಂದಿ ಮತ್ತು ಪಂಚಾಯಿತಿ ಅಭಿವೃದ್ಧಿ ಬೆದರಿಸಿ ಅವರು ಹೇಳಿದ ರೀತಿ ಕೆಲಸ ಮಾಡಿಕೊಡುತ್ತಾರೆ ಎಂದು ಆರೋಪಿಸಿದರು.

        ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ ಆರೋಪಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಠೋಪಕರಣ, ಪಿನಾಯಿಲ್ ಹಾಗೂ ಡಿಡಿಟಿ ಪೌಂಡರ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಖರ್ಚು ಹಾಕಲಾಗಿದೆ. ಇದಕ್ಕೆ ಇಒರವರೇ ಪರೋಕ್ಷವಾಗಿ ಸಹಕಾರ ನೀಡಿದ್ಧಾರೆ. ಬರಗಾಲದ ಈ ಪ್ರದೇಶದಲ್ಲಿ ಕೂಲಿ ಸಿಗದೆ ಪರದಾಡುವ ಸ್ಥಿತಿ ಇದ್ದರೂ ಸಹ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸುವ ಅವಶ್ಯಕತೆ ಏನಿತ್ತು ಎಂದು ಖಾರವಾಗಿ ಪ್ರಶ್ನಿಸಿದರು. ಹಾಜರಿದ್ದ ಸದಸ್ಯರಲ್ಲಿ 28 ಸದಸ್ಯರು ಇಒರವರ ವರ್ಗಾವಣೆ ಆಗಲೇ ಬೇಕು ಈ ಬಗ್ಗೆ ನಿರ್ಣಯ ಇಂದೇ ಪಾಸು ಮಾಡಬೇಕು ಎಂದು ಪಟ್ಟು ಹಿಡಿದು ಸಭೆಯಿಂದ ಹೊರ ನಡೆಸಿದರು.

ಸ್ವಷ್ಟೀಕರಣ:- ತಾಲ್ಲೂಕು ಪಂಚಾಯಿತಿ ಸದಸ್ಯರ ಆಕ್ರೋಶ ಮತ್ತು ಅಸಮಧಾನ, ಸಭಾ ತ್ಯಾಗದ ಬಗ್ಗೆ ಸ್ವಷ್ಟೀಕರಣ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಈಶ್ವರಪ್ರಸಾದ್ ನಾನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರೂ ಸೇರಿದಂತೆ ಎಲ್ಲಾ ಸದಸ್ಯರಿಗೂ ಆಡಳಿತ, ವಿರೋಧ ಪಕ್ಷವೆಂಬ ಭೇದಭಾವ ತೋರದೆ ಎಲ್ಲಾ ಸದಸ್ಯರಿಗೂ ಸಮಾನವಾದ ಸಮಾನವಾದ ಗೌರವವನ್ನು ನೀಡುತ್ತಿದ್ದೇನೆ. ಮಹಿಳಾ ಸದಸ್ಯರಿಗೂ ಸಹ ಅವರು ಕೇಳಿದ ಮಾಹಿತಿಯನ್ನು ನೀಡಿದ್ದೇನೆ. ನಾನು ಎಂದೂ ಸಹ ನನ್ನ ಅಧಿಕಾರ ದರ್ಪ ತೋರಿದ್ದೇನೆಂಬ ಮಾತು ಆಡಿಲ್ಲ.

       ತಾಲ್ಲೂಕಿನಾದ್ಯಂತ ಬರ ಸ್ಥಿತಿ ಇರುವ ಹಿನ್ನೆಲ್ಲೆಯಲ್ಲಿ ಚುನಾಯಿತ ತಾಲ್ಲೂಕು ಪಂಚಾಯಿತಿ ಸದಸ್ಯರು, ಕ್ಷೇತ್ರದ ಶಾಸಕರ ಮಾರ್ಗದರ್ಶದಲ್ಲಿ ನಮ್ಮ ಎಲ್ಲಾ ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಿದೆ. ಕೆಲವು ಸದಸ್ಯರು. ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದ್ದರು. ಆದರೆ, ಈಗಾಗಲೇ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿ ಇದ್ದ ಹಿನ್ನೆಲ್ಲೆಯಲ್ಲಿ ಹೊಸ ಕಾಮಗಾರಿಗೆ ಅವಕಾಶ ನೀಡದೇ ಇದಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ನನಗೆ ಈ ತಾಲ್ಲೂಕಿನಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದೇನೆಂಬ ವಿಶ್ವಾಸವಿದೆ. ನನ್ನ ಮೇಲೆ ಸದಸ್ಯರು ಮಾಡಿರುವ ಆರೋಪವನ್ನು ನಿರಾಕರಿಸುವುದಾಗಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap